ಮನೆಯಲ್ಲಿ ಈ 5 ಗಿಡಗಳನ್ನು ನೆಟ್ಟರೆ ಹಣದ ಕೊರತೆ ಎದುರಾಗುವುದೇ ಇಲ್ಲ .! ಆದರೆ ಈ ತಪ್ಪು ಆಗದಿರಲಿ
ಬಿದಿರಿನ ಗಿಡ : ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಅಥವಾ ಮನೆಯ ಮುಂದೆ ಬಿದಿರಿನ ಗಿಡವನ್ನು ಇಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಮುಂದೆ ಬಿದಿರಿನ ಗಿಡವನ್ನು ನೆಡುವುಡು ಸಾಧ್ಯವಾಗದೇ ಹೋದರೆ, ಮನೆಯೊಳಗೆ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ಇಡಿ.
ದಾಳಿಂಬೆ ಗಿಡ : ದಾಳಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಹಣ್ಣು ಮಾತ್ರವಲ್ಲ. ಆರ್ಥಿಕ ಸ್ಥಿತಿಯ ಮೇಲೆ ಕೂಡಾ ಈ ಗಿಡ ಪರಿಣಾಮ ಬೀರುತ್ತದೆ. ಮನೆಯಲ್ಲಿ ದಾಳಿಂಬೆ ಗಿಡ ನೆಟ್ಟರೆ ಸಾಲದಿಂದ ಮುಕ್ತಿ ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಆದರೆ ಮನೆಯ ನೈಋತ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡವನ್ನು ನೆಡಬೇಡಿ.
ಗರಿಕೆ ಇಲ್ಲದೆ ಗಣೇಶನ ಪೂಜೆ ಅಪೂರ್ಣವಾಗಿತ್ತದೆ. ಮನೆಯ ಮುಂದೆ ಗರಿಕೆ ಇಡುವುದು ತುಂಬಾ ಮಂಗಳಕರ. ಇದು ಮನೆಯಲ್ಲಿ ಸುಖ-ಸಮೃದ್ಧಿ, ಶಾಂತಿಯನ್ನು ತರುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.
ಬಿಲ್ವ ಪತ್ರೆ : ಈಶ್ವರ ಬಿಲ್ವ ಪತ್ರೆಯ ಸಸ್ಯದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಸಸ್ಯ ಮನೆಯಲ್ಲಿದ್ದರೆ ವಾಸ್ತು ದೋಷಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.
ಮನಿ ಪ್ಲಾಂಟ್ : ಮನಿ ಪ್ಲಾಂಟ್ ಹೆಚ್ಚಿನ ಮನೆಗಳಲ್ಲಿ ಇರುತ್ತದೆ. ಆದರೆ ಅದನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ನೆಡುವುದು ಮುಖ್ಯ. ಮನಿ ಪ್ಲಾಂಟ್‌ನ ಬಳ್ಳಿಗಳು ಕೆಳಮುಖವಾಗಿ ನೇತಾಡಬಾರದು. ಅದರ ಬಳ್ಳಿ ಯಾವಾಗಲೂ ಮೇಲಕ್ಕೆ ಏರುವಂತೆ ಇರಬೇಕು.
( ಸೂಚನೆ : ಇಲ್ಲಿ ನೀಡಲಾದ ನವು ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)