ತುಳಸಿ ಗಿಡದ ಪಕ್ಕ ಈ ಸಸಿಯನ್ನು ನೆಟ್ಟರೆ ಮನೆ ತುಂಬಾ ನೆಲೆಸುವುದು ಶಾಂತಿ!ಜೀವನ ಪರ್ಯಂತ ಆಗುವುದಿಲ್ಲ ಒಂದು ರೂಪಾಯಿ ಸಾಲ!
ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ,ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.
ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
ಮನೆಯಲ್ಲಿ ಪತಿ-ಪತ್ನಿಯರ ನಡುವೆ ಸದಾ ಜಗಳಗಳು ನಡೆಯುತ್ತಿದ್ದರೆ, ಅಡುಗೆಮನೆಯ ಹೊರಗೆ ತುಳಸಿ ಗಿಡವನ್ನು ಇರಿಸಿ. ಹೀಗೆ ಮಾಡುವುದರಿಂದ ಸಂಬಂಧಗಳು ಸುಧಾರಿಸಲು ಪ್ರಾರಂಭಿಸುತ್ತವೆ.
ತುಳಸಿ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನೆಟ್ಟರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ. ಮನೆಮಂದಿಯ ಮೇಲೆ ಲಕ್ಷ್ಮೀ ಆಶೀರ್ವಾದ ಹೆಚ್ಚಾಗಿ ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ.
ತುಳಸಿ ಗಿಡ ಎಲ್ಲೇ ಇರಲಿ ಆ ಗಿಡದ ಬಳಿ ಹೂವು ಬಿಡುವ ಸಸ್ಯವನ್ನು ನೆಡಬೇಕು. ಇದು ಮನೆಯಲ್ಲಿ ಸುಖ ಶಾಂತಿ ಸಮೃದ್ದಿಯನ್ನು ಹೆಚ್ಚು ಮಾಡುತ್ತದೆ. ತುಳಸಿ ಗಿಡದ ಬಾಲಿ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡ ನೆಡಬಾರದು.
ಸೂಚನೆ :ಈ ಲೇಖನವು ಧಾರ್ಮಿಕ ವಿಚಾರಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.