Money plant Vastu: ಮನೆ ಅಥವಾ ಕಚೇರಿಯಲ್ಲಿ ಈ ಸಸ್ಯಗಳನ್ನು ನೆಟ್ಟರೆ ಹಣದ ಸುರಿಮಳೆಯಾಗಲಿದೆ!
ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಆರ್ಥಿಕ ಪ್ರಗತಿಯನ್ನು ತರುವ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್ ಮಾತ್ರವಲ್ಲದೆ ಮನೆಯಲ್ಲಿ ಇಡಲು ಆರ್ಥಿಕ ದೃಷ್ಟಿಕೋನದಿಂದ ತುಂಬಾ ಮಂಗಳಕರವೆಂದು ಪರಿಗಣಿಸಲಾದ ಹಲವಾರು ಸಸ್ಯಗಳಿವೆ. ವಾಸ್ತವವಾಗಿ ಈ ಸಸ್ಯಗಳು ಮನೆಯ ಅಲಂಕಾರಕ್ಕೆ ಮೆರಗು ನೀಡುತ್ತದೆ. ಈ ಸಸ್ಯಗಳು ಮನೆಯ ಪರಿಸರವನ್ನು ಪರಿಶುದ್ಧವಾಗಿರಿಸುವುದು ಮಾತ್ರವಲ್ಲದೆ ಆರ್ಥಿಕ ದೃಷ್ಟಿಕೋನದಿಂದ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಯಾವ ಗಿಡಗಳನ್ನು ನೆಟ್ಟರೆ ಸುಖ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬುದನ್ನು ತಿಳಿಯಿರಿ.
ಜೇಡ್ ಸಸ್ಯವು ಆರ್ಥಿಕ ಸಮೃದ್ಧಿ ಮತ್ತು ಅದೃಷ್ಟದೊಂದಿಗೆ ಸಂಬಂಧಿಸಿದೆ. ಇವುಗಳ ಎಲೆಗಳು ವೃತ್ತಾಕಾರದ ನಾಣ್ಯಗಳಂತೆ ಕಾಣುತ್ತವೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂಪತ್ತು ಹರಿದು ಬರುತ್ತದೆ.
ಸುಖ-ಸಂಪತ್ತು ಹರಿದು ಬರಲು Money treeಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಈ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಯಾರಿಗಾದರೂ ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೆ ಖಂಡಿತವಾಗಿಯೂ ಈ ಗಿಡವನ್ನು ಮನೆಯಲ್ಲಿ ನೆಡಿ.
ಈ ಬಿದಿರಿನ ಸಸ್ಯವನ್ನು ಮನೆಯಲ್ಲಿ ನೆಡಲು ತುಂಬಾ ಮಂಗಳಕರ ಮತ್ತು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಬಿದಿರಿನ ಸಸ್ಯವು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ, ಇದನ್ನು ಸಣ್ಣ ಕುಂಡದಲ್ಲಿ ನೆಡಬಹುದು ಮತ್ತು ಯಾವುದೇ ಕೋಣೆಯಲ್ಲಿಯೂ ಇರಿಸಬಹುದು.
ಹಿಂದೂ ಧರ್ಮದಲ್ಲಿ ತುಳಸಿ ಸಸ್ಯವು ತಾಯಿ ಲಕ್ಷ್ಮಿದೇವಿಯೊಂದಿಗೆ ಸಂಬಂಧ ಹೊಂದಿದೆ. ಇದನ್ನು ಅತ್ಯಂತ ಪವಿತ್ರ ಸಸ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸಸ್ಯವು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ತುಳಸಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅದೃಷ್ಟವನ್ನು ತರುತ್ತದೆ ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಲೋವೆರಾ ಸಸ್ಯವು ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಸೌಂದರ್ಯದ ಜೊತೆಗೆ ಇದು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಅದೃಷ್ಟ ನಿಮಗೆ ಒಲಿಯುತ್ತದೆ.