ಪೂಜೆ-ಪುನಸ್ಕಾರ ಅಗತ್ಯವೇ ಇಲ್ಲ... ಶೀಘ್ರವೇ ಕಂಕಣಭಾಗ್ಯ ಕೂಡಿಬರಲು ಮನೆಯ ಈ ದಿಕ್ಕಿನಲ್ಲಿ ಈ ಹೂವಿನ ಗಿಡ ನೆಡಿ!
ಪ್ರಕೃತಿಯೇ ದೇವರು ಎಂದು ನಂಬುವವರು ನಮ್ಮಲ್ಲಿ ಅನೇಕರಿದ್ದಾರೆ. ಈ ಮಾತು ಅಕ್ಷರಶಃ ನಿಜವೂ ಹೌದು. ಹಿಂದೂ ಪುರಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಉಲ್ಲೇಖಗಳನ್ನು ನೀಡಲಾಗಿದೆ.
ಉದಾಹರಣೆಗೆ ತುಳಸಿ ಗಿಡಗಳನ್ನು ಪ್ರತಿಯೊಬ್ಬ ಹಿಂದೂ ಧರ್ಮದವರ ಮನೆಮುಂದೆ ನೆಟ್ಟು ಪೂಜಿಸಾಗುತ್ತದೆ. ಇನ್ನೂ ಕೆಲವೆಡೆ ಬನಗಳ ರೂಪದಲ್ಲಿ ನಾಗದೇವರನ್ನು ಆರಾಧಿಸುವ ಸಂಸ್ಕೃತಿ ಇದೆ. ಇವೆಲ್ಲವೂ ಒಂದೆಡೆ ಧಾರ್ಮಿಕ ಹಿನ್ನೆಲೆಯಲ್ಲಿ ಹೊಂದಿದ್ದರೆ, ಇನ್ನೊಂದೆಡೆ ಪ್ರಕೃತಿ ರಕ್ಷಣೆಯ ಪರಿಕಲ್ಪನೆಯನ್ನೂ ಹೊಂದಿದೆ.
ಇನ್ನು ಕೆಲವೊಂದು ಗಿಡಗಳನ್ನು ವಾಸ್ತು ದೋಷ ನಿವಾರಣೆಗೆಂದು ನೆಡಲಾಗುತ್ತದೆ. ಇದು ಸಮೃದ್ಧಿಯ ಜೊತೆಗೆ ನೆಮ್ಮದಿಯನ್ನೂ ತರುತ್ತದೆ. ಅಂದಹಾಗೆ ಕಂಕಣಬಲ ಕೂಡಿಬರಲು ಒಂದು ಸಸ್ಯವು ಬಹಳಷ್ಟು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆ ಸಸ್ಯ ಯಾವುದು? ಯಾವ ದಿಕ್ಕಿನಲ್ಲಿ ಆ ಸಸ್ಯವನ್ನು ನೆಟ್ಟರೆ ಒಳ್ಳೆಯದು ಎಂಬುದನ್ನು ಮುಂದೆ ತಿಳಿಯೋಣ.
ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಇನ್ನು ಮದುವೆ ನಡೆಯುವುದಕ್ಕೆ ಅಡೆತಡೆ ಉಂಟಾದರೆ ಮನೆಯ ಮುಂಭಾಗದಲ್ಲಿ ಪಿಯೋನಿಯಾ ಎಂಬ ಗಿಡವನ್ನು ನೆಟ್ಟು ನೋಡಿ. ಇದು ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತದೆ.
ಪಿಯೋನಿಯಾ ಸಸ್ಯದ ಬಗ್ಗೆ ಹೇಳುವುದಾದರೆ ಇದು ನೋಡಲು ಗುಲಾಬಿಯಂತೆ ಕಾಣಿಸುತ್ತದೆ. ಪಿಯೋನಿಯಾದ ಹೂವನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಕಾರಣಗಳಿಂದಾಗಿ ಮದುವೆ ವಿನಾಕಾರಣ ಮುಂದೆ ಹೋಗುತ್ತಿರಬಹುದು. ಈ ಸಂದರ್ಭದಲ್ಲಿ ಮನೆಯಲ್ಲಿ ಪಿಯೋನಿಯಾ ಹೂವಿನ ಗಿಡ ನೆಡಬೇಕು. ಇದು ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ. ಈ ಸಸ್ಯವನ್ನು ನೈಋತ್ಯ ದಿಕ್ಕಿಗೆ ನೆಟ್ಟರೆ ಒಳ್ಳೆಯದು.
ಜಾತಕದ ದೋಷದಿಂದ ಹುಡುಗ ಅಥವಾ ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ, ಡ್ರಾಯಿಂಗ್ ರೂಮಿನಲ್ಲಿ ಪಿಯೋನಿಯಾ ಹೂವಿನ ಗಿಡ ಅಥವಾ ಅದರ ವರ್ಣಚಿತ್ರವನ್ನು ಇರಿಸಿ. ಹೀಗೆ ಮಾಡಿದರೆ ಶೀಘ್ರವೇ ಮದುವೆ ಸಂಬಂಧ ಕೂಡಿಬರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.