ಮನೆಯ ಸುತ್ತಮುತ್ತ ಈ ಹೂವಿನ ಗಿಡವನ್ನು ಎಂದಿಗೂ ಬೆಳೆಸಬೇಡಿ... ಅದರ ಪರಿಮಳಕ್ಕೆ ಹಾವುಗಳು ಬರುತ್ತೆ!
ಹಾವುಗಳಿಗೆ ಯಾರು ಹೆದರುವುದಿಲ್ಲ ಹೇಳಿ!! ತೋಟ, ಮನೆ, ಗಾರ್ಡನ್, ಟೆರೇಸ್ʼಗಳಲ್ಲಿ ಹಾವುಗಳು ಕಂಡುಬರುತ್ತವೆ. ಇನ್ನು ಅಂತಹ ಹಾವುಗಳನ್ನು ಕೆಲ ಸಸ್ಯಗಳು ಆಕರ್ಷಿಸುತ್ತವೆ ಎಂದರೆ ನಂಬುತ್ತೀರಾ?
ಮನೆಗಳ ಅಂದ ಹೆಚ್ಚಿಸಲೆಂದು ಗಿಡಗಳನ್ನು ಬೆಳೆಸಲಾಗುತ್ತದೆ. ಅದರಿಂದ ಬರುವ ಹೂವು ಮನೆಗೆ ದುಪ್ಪಟ್ಟು ಶೋಭೆಯನ್ನು ತರುತ್ತದೆ. ಆದರೆ ಅಂತಹ ಹೂವಿನ ಗಿಡಗಳು ಹಾವುಗಳನ್ನು ಆಕರ್ಷಿಸುತ್ತವೆ ಎಂದರೆ ನಂಬಲೇಬೇಕು. ಅಂತಹ ಗಿಡಗಳಲ್ಲಿ ಹೆಚ್ಚಾಗಿ ಹಾವುಗಳು ಬಂದು ನೆಲೆಸುತ್ತವೆ.
ಮಲ್ಲಿಗೆ ಹೂ- ಜಾಸ್ಮಿನ್ ವೈನ್ಸ್ ಕುಟುಂಬದ ಸಸ್ಯಗಳ ಬಳಿ ಹಾವುಗಳು ವಾಸಿಸುವ ಹೆಚ್ಚಿನ ಸಾಧ್ಯತೆಯಿದೆ. ಮಲ್ಲಿಗೆ ಗಿಡವು ಇದೇ ಜಾತಿಗೆ ಸೇರಿದ್ದಾಗಿದೆ. ಇನ್ನು ಈ ಗಿಡದಿಂದ ಬರುವ ಗಾಢ ಪರಿಮಳವು ಹಾವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ.
ಸೈಪ್ರೆಸ್: ಸೈಪ್ರೆಸ್ ಎಂಬುದು ಅಲಂಕಾರಿಕ ಗಿಡ. ಇದು ಗಾರ್ಡನ್ ಅಂದ ಹೆಚ್ಚಿಸುತ್ತದೆ. ಆದರೆ ಇದು ದಟ್ಟವಾಗಿ ಬೆಳೆಯುವ ಕಾರಣ, ಅದರಲ್ಲಿ ಹಾವುಗಳು ಹೆಚ್ಚಾಗಿ ಬಂದು ಸೇರುತ್ತವೆ. ಅಷ್ಟೇ ಅಲ್ಲದೆ, ಅದರಲ್ಲಿ ಅಡಗಿಕೊಂಡು ಕೀಟಗಳನ್ನು ಬೇಟೆಯಾಡುತ್ತವೆ.
ಕ್ಲೋವರ್ ಸಸ್ಯಗಳು- ಕ್ಲೋವರ್ ಸಸ್ಯಗಳು ಅಲಂಕಾರಿಕ ಸಸ್ಯಗಳಾಗಿವೆ. ಇದರ ಎಲೆಗಳು ದಪ್ಪ ಮತ್ತು ದಟ್ಟವಾಗಿರುತ್ತವೆ. ಭೂಮಿಯನ್ನು ಸಂಪೂರ್ಣವಾಗಿ ಆವರಿಸುವ ಕಾರಣದಿಂದ ಹಾವುಗಳು ಈ ಎಲೆಯ ಕೆಳಗೆ ಆರಾಮವಾಗಿ ಸುರುಳಿಯಾಗಿ ಕುಳಿತಿರುತ್ತದೆ.
ನಿಂಬೆ ಮರ- ನಿಂಬೆ ಮರ ಅಥವಾ ಯಾವುದೇ ಸಿಟ್ರಸ್ ಮರವು ಇಲಿಗಳು ಮತ್ತು ಸಣ್ಣ ಪಕ್ಷಿಗಳಿಗೆ ನೆಲೆಯಾಗಿದೆ. ಇದರಲ್ಲಿ ಬೆಳೆಯುವ ಹಣ್ಣುಗಳನ್ನು ತಿನ್ನಲು ಯೋಗ್ಯ ಎಂಬ ಕಾರಣಕ್ಕೆ ಇಲ್ಲಿ ವಾಸಿಸುತ್ತವೆ. ಆದರೆ ಇದೇ ಕಾರಣದಿಂದ ಈ ಗಿಡದ ಸುತ್ತಲೂ ಹಾವುಗಳು ಸುಳಿದಾಡುತ್ತಿರುತ್ತವೆ.
ಪೈನ್ ಮರ- ಅತಿ ಎತ್ತರದ ಸ್ಥಳಗಳಲ್ಲಿ ಬೆಳೆಯುವ ಈ ಮರ ಇದಾಗಿದ್ದು, ಹಾವುಗಳು ಇದರಲ್ಲಿ ಸುತ್ತು ಹಾಕಿಕೊಂಡು ಇರುತ್ತವೆ. ಈ ಮರಗಳು ಕೆಲವು ವರ್ಷಗಳವರೆಗೆ ಬಾಳಿಕೆ ಬರುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.