ಮನೆಯ ಮುಂದೆ ಇದೊಂದು ಗಿಡ ಬೆಳೆಸಿ… ಇಲಿ, ಹಲ್ಲಿ, ನೊಣ, ಸೊಳ್ಳೆ ಯಾವುದೂ ಬರಲ್ಲ!
ಮನೆಯನ್ನು ಎಷ್ಟೇ ಶುಚಿಗೊಳಿಸಿದರೂ ಹಲ್ಲಿ, ನೊಣ, ಇರುವೆಗಳು ಬರುತ್ತಲೇ ಇರುತ್ತವೆ. ಅಡುಗೆ ಮನೆ, ಸ್ನಾಹ ಗೃಹ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಕೆಲ ಗಿಡಗಳು ಇಲಿ, ಹಲ್ಲಿ, ನೊಣ, ಸೊಳ್ಳೆ ಸೇರಿದಂತೆ ಮನೆಯಲ್ಲಿ ಕಿರಿಕಿರಿಯನ್ನುಂಟು ಮಾಡುವ ಕೀಟಗಳನ್ನು ದೂರಮಾಡುತ್ತವೆ.
ಪುದೀನಾ ಎಲೆಯ ಸುವಾಸನೆ ಮನುಷ್ಯರಿಗೆ ಖುಷಿ ನೀಡಿದರೂ ಕೆಲ ಕೀಟಗಳಿಗೆ ಹಿಡಿಸುವುದಿಲ್ಲ. ಅದರಲ್ಲಿ ಹಲ್ಲಿ ಕೂಡ ಒಂದು. ಮನೆಯಲ್ಲಿ ಪುದೀನಾ ಗಿಡ ನೆಟ್ಟರೆ, ಹಲ್ಲಿಗಳು ಮಾತ್ರವಲ್ಲ ಇಲಿಯ ಕಾಟ ಕೂಡ ಕಡಿಮೆಯಾಗುತ್ತದೆ. ಏಕೆಂದರೆ ಪುದೀನವು ಮೆಂಥಾಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ, ಇದು ಬಲವಾದ ವಾಸನೆಯನ್ನು ಹೊರಸೂಸುವ ಕಾರಣ ಅವುಗಳಿಗೆ ಈ ವಾಸನೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ.
ಹಲ್ಲಿಗಳನ್ನು ಓಡಿಸಲು ಲೆಮೆನ್ ಗ್ರಾಸ್ ಅನ್ನು ಸಹ ನೆಡಬಹುದು. ಇದು ಒಂದು ರೀತಿಯ ಹುಲ್ಲು, ರುಚಿಯಲ್ಲಿ ಹೆಸರೇ ಹೇಳುವಂತೆ ನಿಂಬೆಯ ಸ್ವಾದ ಮತ್ತು ಪರಿಮಳವನ್ನು ಹೊಂದಿರುತ್ತದೆ. ಇದರ ವಾಸನೆಯಿಂದಾಗಿ, ಹಲ್ಲಿಗಳು ಅಲ್ಲಿಂದ ಓಡಿಹೋಗುತ್ತವೆ. ಅಲ್ಲದೆ, ನಿಂಬೆ ಹುಲ್ಲಿನಲ್ಲಿ ಸಿಟ್ರೋನಿಲ್ಲಾ ಎಂದು ಕರೆಯಲ್ಪಡುವ ವಿಶೇಷ ರೀತಿಯ ರಾಸಾಯನಿಕವಿದೆ. ಇದನ್ನು ಅನೇಕ ಕೀಟ ನಾಶಕ ಸ್ಪ್ರೇಗಳಲ್ಲಿಯೂ ಬಳಸಲಾಗುತ್ತದೆ.
ಹಲ್ಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರಿಗೋಲ್ಡ್ ಗಿಡ ಅಥವಾ ಚೆಂಡು ಹೂವಿನ ಗಿಡವನ್ನೂ ನೆಡಬಹುದು. ಇದರ ಹೂವುಗಳು ಪೈರೆಥ್ರಿನ್ ಮತ್ತು ಟ್ರೆಪೆಜಿಯಂ ಎಂಬ ಕೀಟನಾಶಕಗಳನ್ನು ಹೊಂದಿರುತ್ತವೆ. ಅದರ ವಾಸನೆ ಬಂದರೆ ಸಾಕು ಹಲ್ಲಿಗಳು ಓಡಿಹೋಗುತ್ತವೆ.
ರೋಸ್ಮರಿ ಸಸ್ಯದಿಂದ ತೆಗೆದ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇನ್ನು ಈ ಸಸ್ಯವು ವಿಚಿತ್ರವಾದ ವಾಸನೆಯನ್ನು ಸಹ ಹೊರಸೂಸುತ್ತದೆ. ಇದರಿಂದಾಗಿ ಹಲ್ಲಿ ಸೇರಿದಂತೆ ನೊಣ, ಸೊಳ್ಳೆಗಳು ಮನೆಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.