ಮರದ ಬಾಚಣಿಗೆ Vs ಪ್ಲಾಸ್ಟಿಕ್ ಬಾಚಣಿಗೆ..! ಇವುಗಳಲ್ಲಿ ಯಾವುದು ಉತ್ತಮ..?
ಪ್ರತಿನಿತ್ಯ ಕೂದಲನ್ನು ಬಾಚಲು ನಾವು ಬಾಚಣಿಗೆಯನ್ನು ಬಳಸುತ್ತೇವೆ. ಅವು ಕೇಶ ವಿನ್ಯಾಸಕ್ಕೆ ತುಂಬಾ ಉಪಯುಕ್ತವಾಗಿವೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕನ್ನಡಿ ಮುಂದೆ ನಿಂತು ತಲೆ ಬಾಚಿಕೊಂಡೇ ನಾವು ಮನೆಯಿಂದ ಹೊರಗೆ ಹೋಗುವುದು.. ಹಾಗಿದ್ರೆ ಪ್ರತಿನಿತ್ಯ ಬಳಸುವ ಬಾಚಣಿಗೆಯಲ್ಲಿ ಉತ್ತಮವಾದದ್ದು ಯಾವುದು.? ತಿಳಿಯೋಣ ಬನ್ನಿ..
ಹೇರ್ ಬ್ರಷ್‌ಗಳು, ಪ್ಲಾಸ್ಟಿಕ್ ಬಾಚಣಿಗೆ ಮರದ ಬಾಚಣಿಗೆಯಂತೆ (Solution for premature White Hair) ಆರೋಗ್ಯಕರವಲ್ಲ. ಅವುಗಳು ಹೆಚ್ಚುವರಿಯಾಗಿ ನಿಮಗೆ ಉತ್ತಮ ನೋಟ ನೀಡಬಹುದಷ್ಟೆ ಆದರೆ, ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಇಂದಿಗೂ ಸಹ ಅನೇಕರು ಮರದ ಬಾಚಣಿಗೆಯನ್ನೇ ಬಳಸುತ್ತಾರೆ.
ಮರದ ಬಾಚಣಿಗೆಗಳು ಪ್ಲಾಸ್ಟಿಕ್ ಬಾಚಣಿಗೆಗಳಿಗಿಂತ ಉತ್ತಮವಾಗಿವೆ, ಏಕೆಂದರೆ ಮರದ ಬಾಚಣಿಗೆಗಳು ಎಣ್ಣೆಯನ್ನು ಹಚ್ಚಿಕೊಳ್ಳುವಾಗ ನೆತ್ತಿ ಮತ್ತು ಕೂದಲಿನ ಉದ್ದಕ್ಕೂ ತೈಲಗಳನ್ನು ವಿತರಿಸಲು ಸಹಾಯ ಮಾಡುವ ಮೂಲಕ ಕೂದಲನ್ನು ಪೋಷಿಸುತ್ತವೆ. ಮರದ ಬಾಚಣಿಗೆಯು ಒದ್ದೆ ಕೂದಲನ್ನು ಬಿಡಿ ಬಿಡಿಯಾಗಿಸುತ್ತವೆ, ಆದರೆ ಬ್ರಷ್ ಹಸಿ ಕೂದಲಿಗೆ ಹಾನಿ ಮಾಡುತ್ತವೆ.. ಒಣ ಕೂದಲನ್ನು ಚಾಚುವಾಗ ಪ್ಲಾಸ್ಟಿಕ್ ಬಾಚಣಿಗೆ ಬಳಸಬಹುದು.
ಅಲ್ಲದೆ, ಮರದ ಬಾಚಣಿಗೆಗಳು ಯಾವುದೇ ರೀತಿಯ ಕೂದಲಿಗೆ ಸರಿಹೊಂದುತ್ತವೆ. ಅದರೆ ಹೇರ್ ಬ್ರಶಿಂಗ್ ಕರ್ಲಿ ಕೂದಲಿನ ಪ್ರಕಾರಗಳಿಗೆ ಸರಿಹೊಂದುವುದಿಲ್ಲ. ನೆನಪಿನಲ್ಲಿಡಿ ಎರಡೂ ಬಾಚಣಿಗೆಗಳು ಅವುಗಳದ್ದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ನಿಮ್ಮ ಕೂದಲಿನ ಪ್ರಕಾರವನ್ನು ಆಧರಿಸಿ ಬ್ರಷ್ಗಳನ್ನು ಆಯ್ಕೆ ಮಾಡುವುದು ಒಳ್ಳೆಯದು.