PM Kisan: ಈ ರೈತರಿಗೆ ಮೋದಿ ಸರ್ಕಾರದಿಂದ ಶೀಘ್ರದಲ್ಲೇ ಸಿಗಲಿದೆ ಭರ್ಜರಿ ಉಡುಗೊರೆ
ನವದೆಹಲಿ: ಅನ್ನದಾತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಅನುದಾನ ನೀಡುವ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಿಂದ ತಪ್ಪಾದ ಮಾಹಿತಿ ನೀಡಿರುವ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇದುವರೆಗೂ 2 ಕೋಟಿಗೂ ಹೆಚ್ಚು ರೈತರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಸಂಬಂಧಪಟ್ಟ ರೈತರ ಡಾಟಾವನ್ನು ಪರಿಷ್ಕರಿಸಿ ಪಾವತಿಯನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಿದೆ. ಈ ಹಿನ್ನಲೆಯಲ್ಲಿ ಈ ರಾಜ್ಯದ ರೈತರು ಶೀಘ್ರದಲ್ಲೇ 4333.40 ಕೋಟಿ ರೂ. ಹಣ ಪಡೆಯಲಿದ್ದಾರೆ.
ಉತ್ತರ ಪ್ರದೇಶ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ. ಇಲ್ಲಿನ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಸ್ವಾಭಾವಿಕವಾಗಿ ಉತ್ತರ ಪ್ರದೇಶದಲ್ಲಿ ರೈತರ ಸಂಖ್ಯೆಯೂ ಹೆಚ್ಚು. ಆದ್ದರಿಂದ ಉತ್ತರ ಪ್ರದೇಶದವರು ಈ ಯೋಜನೆಯ ಹೆಚ್ಚಿನ ಲಾಭವನ್ನು ಸಹ ಪಡೆದಿದ್ದಾರೆ. ಇಲ್ಲಿಯವರೆಗೆ ರಾಜ್ಯದ ಸುಮಾರು 2.35 ಕೋಟಿ ರೈತರು ಆರು ಕಂತುಗಳಲ್ಲಿ 22594.78 ರೂ.ಗಳನ್ನು ಪಡೆದಿದ್ದಾರೆ.
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ, ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸುವ ರೈತನ ಆದಾಯ ದಾಖಲೆಗಳು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕವಷ್ಟೇ ಕೇಂದ್ರ ಸರ್ಕಾರ ಹಣವನ್ನು ಜಮಾ ಮಾಡುತ್ತದೆ. ರಾಜ್ಯ ಸರ್ಕಾರ ದಾಖಲೆ ಪರಿಶೀಲಿಸಿದ ನಂತರ, ಎಫ್‌ಟಿಒ ಉತ್ಪತ್ತಿಯಾಗುತ್ತದೆ ಮತ್ತು ಬಳಿಕ ಕೇಂದ್ರ ಸರ್ಕಾರವು ಹಣವನ್ನು ಖಾತೆಗೆ ಹಾಕುತ್ತದೆ.
ಈ ಕಂತುಗಳು ನಿಮ್ಮ ಖಾತೆಗೆ ಬರಬೇಕಾದರೆ ರೈತರು ಕೆಲವು ವಿಷಯಗಳನ್ನು ನೋಡಿಕೊಳ್ಳಬೇಕು. ಹಲವು ಬಾರಿ ನೋಂದಾಯಿಸಿದರೂ, ಸರ್ಕಾರದ ಸಹಾಯಧನ ಖಾತೆಯಲ್ಲಿ ಲಭ್ಯವಿಲ್ಲ ಎಂದಾದರೆ ರೈತರು ಮೊದಲು ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಪಟ್ಟಿಯಲ್ಲಿ ಹೆಸರು ಇದ್ದರೆ, ಹಣವು ನಿಮ್ಮ ಖಾತೆಗೆ ಬರುತ್ತದೆ, ಇಲ್ಲದಿದ್ದರೆ ಅದು ಬರುವುದಿಲ್ಲ.
1. ಮೊದಲು ಪಿಎಂ ಕಿಸಾನ್ ಸಮ್ಮನ್ ನಿಧಿ pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2. ಇದರ ನಂತರ ಮೇಲ್ಭಾಗದಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಅನ್ನು ನೋಡುತ್ತೀರಿ, ಅದನ್ನು ಕ್ಲಿಕ್ ಮಾಡಿ 3. ನಂತರ ಫಲಾನುಭವಿ ಸ್ಥಿತಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ 4. ಈಗ ನೀವು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಹೆಸರು ಪಿಎಂ ಕಿಸಾನ್ ಸಮ್ಮನ್ ನಿಧಿಯಲ್ಲಿದೆ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ. ನಿಮ್ಮ ಹೆಸರನ್ನು ನೋಂದಾಯಿಸಿದ್ದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡುಬರುತ್ತದೆ.
ಇದಲ್ಲದೆ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಅಥವಾ ಇಲ್ಲವೇ ಎಂಬುದನ್ನು ನೀವು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದು. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ಇಲ್ಲಿ ಭರ್ತಿ ಮಾಡಿ. ನಿಮ್ಮ ಹೆಸರು ಪಟ್ಟಿಯಲ್ಲಿದೆ ಅಥವಾ ಇಲ್ಲವೇ ಎಂಬುದು ನಿಮಗೆ ತಕ್ಷಣ ತಿಳಿಯುತ್ತದೆ.