ಮಹಾಕಾಲನ ಸನ್ನಿದಾನದಲ್ಲಿ ನಮೋ : ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ

Tue, 11 Oct 2022-9:32 pm,

ಉಜ್ಜಯಿನಿ ಮಹಾಕಾಲ್ ಲೋಕ ಯೋಜನೆಯ ಅಡಿಯಲ್ಲಿ ಮಾಹಾಕಾಲ ಕಾರಿಡಾರ್‌ ನಿರ್ಮಿಸಲಾಗಿದೆ. ದೇವಾಲಯದ ಆವರಣವನ್ನು ದೊಡ್ಡದಾಗಿ ಮತ್ತು ಬಹಳ ಚೊಕ್ಕವಾಗಿ ಕಟ್ಟಲಾಗಿದೆ. ಯಾತ್ರಾರ್ಥಿಗಳಿಗೆ ಪೂಜೆ ಸಲ್ಲಿಸಲು ಸುಲಭವಾಗುವ ನಿಟ್ಟಿನಲ್ಲಿ ಕಾರಿಡಾರ್‌ನ ಮೊದಲ ಹಂತ ಉದ್ಘಾಟನೆಯಾಗಿದೆ.

ಸಂಜೆ 7 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಅವರು 'ಮಹಾಕಲ್ ಲೋಕ' ಕಾರಿಡಾರ್‌ನ್ನು ಉದ್ಘಾಟಿಸಿದರು. ನಂತರ ಆರಾಧ್ಯ ದೈವ ಮಹಾಕಾಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾಶಿ ವಿಶ್ವನಾಥ ಧಾಮದಂತೆಯೇ ಮಹಾಕಾಲ್‌ ಕಾರಿಡಾರ್‌ ನಿರ್ಮಿಸಲಾಗಿದೆ. ಗಂಗಾ ಘಾಟ್‌ನಿಂದ ದೇವಾಲಯದ ಸಂಕೀರ್ಣದವರೆಗೆ ದೊಡ್ಡದಾಗಿ ಕಾರಿಡಾರ್ ನಿರ್ಮಿಸಲಾಗುತ್ತಿದ್ದು ಇಂದು ಮೊದಲ ಹಂತದ ಕಾರಿಡಾರ್‌ ನಿರ್ಮಿಸಲಾಗಿದೆ. 

856 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ಕಾರಿಡಾರ್‌ ನಿರ್ಮಾಣವಾಗಿದೆ. ನೂತನ ಆವರಣದಲ್ಲಿ 190ಕ್ಕೂ ಹೆಚ್ಚು ಶಿವನ ಪ್ರತಿಮೆಗಳನ್ನು ಕೆತ್ತಲಾಗಿದೆ. 12 ಮೀ. ಅಗಲದ ಪ್ರದೇಶವನ್ನು ಭಕ್ತರ ಓಡಾಟಕ್ಕೆ ಮೀಸಲಿಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link