ವಿವಾಹಿತ ಮಹಿಳೆಯರಿಗಾಗಿ ಇಲ್ಲಿದೆ ಬಂಪರ್ ಆಫರ್.. ಕೂತಲ್ಲಿಯೇ 11000 ರೂ. ಪಡೆಯಬಹುದು..! ಹೀಗೆ ಅಪ್ಲೈ ಮಾಡಿದ್ರೆ ಸಾಕು
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರ್ಕಾರ ದೇಶದ ಜನರಿಗಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ, ಇಲ್ಲಿಯವರೆಗೂ ದೇಶದಲ್ಲಿ 510 ಕ್ಕೂ ಹೆಚ್ಚು ಯೋಜನೆಗಳು ಜಾರಿಯಲ್ಲಿವೆ ಎಂದೆ ಹೇಳಬಹುದು.
ಕೇಂದ್ರ ಸರ್ಕಾರ ಸಾಮಾನ್ಯವಾಗಿ ಹಲವಾರು ಯೋಜನೆಗಳನ್ನು ದೇಶದ ಜನರ ಮುಂದೆ ತರುತ್ತಿದೆ. ಇದರಿಂದ ಅನೇಕ ಬಡ ಕುಟುಂಬ ಹಾಗೂ ಮಧ್ಯಮ ವರ್ಗದ ಕುಟುಂಬಗಲಿಗೆ ಸಹಾಯವಾಗುತ್ತಿದೆ.
ಅದರಲ್ಲೂ ಮಹಿಳೆಯರಿಗಾಗಿ ಹೆಚ್ಚು ಪ್ರಾಮುಖ್ಯತ ನೀಡುವ ಕೇಂದ್ರ ಸರ್ಕಾರ ವಿವಾಹಿತ ಹೆಣ್ಣುಮಕ್ಕಳಿಗಾಗಿ ಹೊಸ ಯೋಜನೆಯೊಂದನ್ನು ದೇಶದ ಮಹೀಲೆಯರ ಮುಂದೆ ತಂದಿದೆ.
ಈ ಯೋಜನೆಯ ಹೆಸರು ಮಾತೃ ವಂದನಾ ಯೋಜನೆ. ಈ ಯೋಜನೆಯೂ ಪ್ರತ್ಯೇಕವಾಗಿ ಗರ್ಭಿಣಿ ಮಾಹಿಳೆಯರಿಗೆಂದು ಜಾರಿಗೆ ತರಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ರೂ.11000 ನೀಡುತ್ತಿದೆ.
ಈ ಯೋಜನೆಯನ್ನೂ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಕೆ ನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಹಿಂದಿರುವ ಕುಟುಂಬದ ಮಹಿಳೆಯರು ಈ ಆರ್ಥಿಕ ನೆರವನ್ನು ಪಡೆಯಬಹುದು.
ಇನ್ನೂ ಈ ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಯೋಜನೆಯನ್ನು ಗರ್ಭಿಣಿಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಕೂಲಿ ಮಾಡಲು ಹೋಗುವ ಮಹಿಲಳೆಯರ ಆರೋಗ್ಯವನ್ನು ನೆನಪಿನಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.
ಕೂಲಿ ಮಾಡಲು ಹೋಗುವ ಮಹಿಳೆಯರು ಗರ್ಭಾವಸ್ತೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಹಣದ ಸಮಸ್ಯೆಯಿಂದ ಬಳಲುತ್ತಾರೆ. ತಿನ್ನಲು ಸರಿಯಾದ ಪೌಷ್ಟಿಕವಾದ ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಾರೆ.
ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ಇಂತಹ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಇಂತಹದ್ದೊಂದು ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಗಾಗಿ ಅಪ್ಲಿಕೇಶನ್ ಅನ್ನು ನೀವು ಆನ್‌ಲೈನ್ ಅಥವಾ ಆಫ್‌ಲೈನ್ ಎರಡರಲ್ಲೂ ಸಲ್ಲಿಸಬಹುದು.