PMBJP:ಸರ್ಕಾರದ ಸಹಾಯದಿಂದ ಮನೆಯಿಂದಲೇ ಆರಂಭಿಸಿ ಈ ಉದ್ಯೋಗ, ಕೈತುಂಬಾ ಗಳಿಕೆಯ ಅವಕಾಶ
1. ಪ್ರಸ್ತುತ ದೇಶಾದ್ಯಂತ 7733 ಜನ ಔಷಧಿ ಕೇಂದ್ರಗಳಿವೆ - ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತದ ಸುಮಾರು 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಜಿಲ್ಲೆಗಳಲ್ಲಿ ಸುಮಾರು 7733 ಜನ ಔಷಧಿ ಕೇಂದ್ರಗಳು (PMBJP) ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ 1449 ಔಷಧಿಗಳು ಹಾಗೂ 204 ಸರ್ಜಿಕಲ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳ ಮಾರಾಟ ನಡೆಸಲಾಗುತ್ತಿದೆ. N-95 ಮಾಸ್ಕ್ ಕೇವಲ ರೂ.25 ಹಾಗೂ ಸ್ಯಾನಿಟೈಸರ್ ಕೂಡ ಅತ್ಯಂತ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿಯೂ ಕೂಡ ಜನ ಔಷಧಿ ಕೇಂದ್ರಗಳ ಮೂಲಕ ಸುಮಾರು 4000 ಕೋಟಿ ರೂ.ಉಳಿತಾಯ ಮಾಡಲಾಗಿತ್ತು. PMBJP ಅಡಿ ಯಾವುದೇ ಔಷಧಿಯ ಬೆಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡೆಡ್ ಔಷಧಿಗಳ ಹೋಲಿಕೆಯಲ್ಲಿ ಶೇ.80 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
2. ಸಾವಿರಾರು ಯುವಕರಿಗೆ ಉದ್ಯೋಗಾವಕಾಶ - ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯ ಅಡಿ ಪ್ರಸ್ತುತ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಲಭಿಸಿದೆ. ಇದರ ಅಡಿ ಸಾವಿರಾರು ಯುವಕರು ತಮ್ಮ ನಗರ ಅಥವಾ ಪ್ರದೇಶಗಳಲ್ಲಿಯೇ ಇದ್ದುಕೊಂಡು ತಿಂಗಳಿಗೆ ಕೈತುಂಬಾ ಸಂಪಾದಿಸುತ್ತಿದ್ದಾರೆ. ವೈಯಕ್ತಿಕವಾಗಿ ಕೇಂದ್ರ ಸರ್ಕಾರ ಜನಔಷಧಿ ಕೇಂದ್ರ ತೆರೆಯಲು ಹಲವು ರೀತಿಯ ಪ್ರೋತ್ಸಾಹನ ನೀಡುತಿದೆ. ಸರ್ಕಾರಿ ಔಷಧಿ ಕೇಂದ್ರ ತೆರೆದ ಮೇಲೆ ಜನರ ಲಾಭದ ಕುರಿತು ಕೂಡ ವಿಶೇಷ ಗಮನಹರಿಸಲಾಗುತ್ತಿದೆ. ಇದಲ್ಲದೆ ಇದರ ನಿಯಮ ಹಾಗೂ ಷರತ್ತುಗಳೂ ಕೂಡ ತುಂಬಾ ಸರಳವಾಗಿವೆ.
3. ಸುವರ್ಣಾವಕಾಶ: ಇನ್ನೂ 3000 ಕೇಂದ್ರಗಳು ತಲೆ ಎತ್ತಲಿವೆ - ಪ್ರಸ್ತುತ ಸಮಯದಲ್ಲಿ ದೇಶಾದ್ಯಂತ ಸುಮಾರು 7733 ಜನಔಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ 734 ಜಿಲ್ಲೆಗಳಲ್ಲಿ ಇವುಗಳನ್ನು 10500 ಕ್ಕೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ. ಅಂದರೆ, ಇನ್ನೂ 3000 ಹೊಸ ಕೇಂದ್ರಗಳು ತಲೆ ಎತ್ತಲಿವೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಾವಕಾಶದ ನಿರೀಕ್ಷೆಯಲ್ಲಿರುವ ಯುವಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
4. ಯಾರು ಮತ್ತು ಹೇಗೆ ಔಷಧಿ ಅಂಗಡಿಯನ್ನು ತೆರೆಯಬಹುದು - ವೈಯಕ್ತಿಕವಾಗಿ ಯಾರಾದರೊಬ್ಬರು ಈ ಔಷಧಿ ಅಂಗಡಿಯನ್ನು ತೆರೆಯಲು ಬಯಸುತ್ತಿದ್ದರೆ ಅವರ ಬಳಿ ಡಿ-ಫಾರ್ಮ್ ಅಥವಾ ಬಿ-ಫಾರ್ಮ್ ಡಿಗ್ರೀ ಇರುವ ಅವಶ್ಯಕತೆ ಇದೆ. ಅಥವಾ ಅವರು ಯಾವುದೇ ಒಬ್ಬ ಡಿ-ಫಾರ್ಮ್ ಅಥವಾ ಬಿ-ಫಾರ್ಮ್ ಪದವಿ ಹೊಂದಿರುವ ಯುವಕನಿಗೆ ಉದ್ಯೋಗ ನೀಡಿರಬೇಕು. ಅರ್ಜಿ ಸಲ್ಲಿಸುವಾಗ ಅವರು ಈ ಡಿಗ್ರಿಗೆ ಸಂಬಂಧಿಸಿದಂತೆ ಪ್ರೂಫ್ ಸಲ್ಲಿಸಬೇಕು.
5. ಒಂದು ವೇಳೆ ಯಾವುದಾದರೊಂದು ಸಂಸ್ಥೆ ಅಥವಾ NGO ಜನ ಔಷಧಿ ಕೇಂದ್ರ ತೆರೆಯಲು ಬಯಸುತ್ತಿದ್ದರೆ. ಅವುಗಳು ಕೂಡ ಯಾವುದೇ ಓರ್ವ ಡಿ-ಫಾರ್ಮ್ ಅಥವಾ ಬಿ-ಫಾರ್ಮ್ ಉದ್ಯೋಗಿಗೆ ಉದ್ಯೋಗಾವಕಾಶ ಕಲ್ಪಿಸಿರಬೇಕು. ಆಸ್ಪತ್ರೆಗಳಲ್ಲಿಯೂ ಕೂಡ ಮಾನ್ಯತೆ ಪಡೆದ NGO/ಚಾರಿಟೇಬಲ್ ಟ್ರಸ್ಟ್ ಜನ ಔಷಧಿ ಕೇಂದ್ರವನ್ನು ತೆರೆಯ ಬಹುದು
6. ಆದಾಯ ಹೇಗಿದೆ? - ಶೇ.20 ರಷ್ಟು ಮಾರ್ಜಿನ್- ಈ ಕುರಿತು ಮಾರ್ಗಸೂಚಿಗಳಲ್ಲಿ ಹೇಳಿರುವ ಹಾಗೆ ಜನ ಔಷಧಿ ಕೇಂದ್ರಗಳ ಮೂಲಕ ಔಷಧಿ ಮಾರಾಟ ಮಾಡುವ ಮೂಲಕ ಶೇ.20 ರಷ್ಟು ಮಾರ್ಜಿನ್ ಅಂಗಡಿ ನಡೆಸುವವರಿಗೆ ನೀಡಲಾಗುತ್ತದೆ. ಇದಲ್ಲದೆ ನಾರ್ಮಲ್ ಹಾಗೂ ಸ್ಪೆಷಲ್ ಇನ್ಸೇನ್ಟಿವ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ.
7. ನಾರ್ಮಲ್ ಇನ್ಸೆನ್ಟೀವ್ -ನಾರ್ಮಲ್ ಇನ್ಸೇನ್ಟೀವ್ ನಲ್ಲಿ ಸರ್ಕಾರ ಔಷಧಿ ಅಂಗಡಿ ತೆರೆಯಲು ಬಂದ ಖರ್ಚನ್ನು ನಿಮಗೆ ವಾಪಸ್ ನೀಡುತ್ತದೆ. ಇದರಲ್ಲಿ ಅಂಗಡಿಗೆ ಬೇಕಾಗುವ ಫರ್ನಿಚರ್ ಗೆ ತಗಲುವ 1.5 ಲಕ್ಷ ರೂ, ಕಂಪೂಟರ್ ಹಾಗೂ ರೆಫ್ರಿಜರೇಟರ್ ಗೆ ತಗುಲುವ 50 ಸಾವಿರ ರೂ. ಶಾಮೀಲಾಗಿವೆ. 2 ಲಕ್ಷ ಮೊತ್ತ ಪೂರ್ಣಗೊಳ್ಳುವವರೆಗೆ ಅದನ್ನು ಮಾಸಿಕ ಆಧಾರದ ಮೇಲೆ ಗರಿಷ್ಠ 15 ಸಾವಿರ ರೂಪಾಯಿಗಳವರೆಗೆ ಹಿಂದಿರುಗಿಸಲಾಗುತ್ತದೆ. ಇದಕ್ಕೆ ಪ್ರೋತ್ಸಾಹಕ ಮಾಸಿಕ ಖರೀದಿಯ ಶೇ. 15 ರಷ್ಟು ಅಥವಾ 15000 ಯಾವುದು ಹೆಚ್ಚಿದೆಯೋ ಅದನ್ನು ನೀಡಲಾಗುತ್ತದೆ.
8. ಸ್ಪೆಷಲ್ ಇನ್ಸೇನ್ಟೀವ್- ಇದನ್ನು ಮಹಿಳಾ ವ್ಯಾಪಾರಿಗಳು, ದಿವ್ಯಾಂಗರು, SC ಹಾಗೂ ST ಪಂಗಡದವರು ಜನ ಔಷಧಿ ಕೇಂದ್ರ ತೆರೆದವರಿಗೆ ಇದನ್ನು ನೀಡಲಾಗುತ್ತದೆ. ಈಶಾನ್ಯ ಅಥವಾ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಕೇಂದ್ರ ತೆರೆದವರಿಗೂ ಕೂಡ ಇದನ್ನು ನೀಡಲಾಗುತ್ತದೆ.
9. ಇಲ್ಲಿ ನಿಮಗೆ ಫಾರ್ಮ್ ಸಿಗಲಿದೆ - ಜನ ಔಷಧಿ ಕೇಂದ್ರಕ್ಕಾಗಿ ಚಿಲ್ಲರೆ ಔಷಧಿಯ ಮಾರಾಟಕ್ಕೆ ಲೈಸನ್ಸ್ ಅನ್ನು ಜನ ಔಷಧಿ ಕೇಂದ್ರದ ಹೆಸರಿನಲ್ಲಿ ಪಡೆಯಬೇಕು. https://janaushadhi.gov.in/ ವೆಬ್ ಸೈಟ್ ಮೂಲಕ ಈ ಫಾರ್ಮ್ ಅನ್ನು ನೀವು ಡೌನ್ಲೋಡ್ ಮಾಡಬಹುದು. ಫಾರ್ಮ್ ಡೌನ್ಲೋಡ್ ಮಾಡಿದ ಬಳಿಕ ಅದನ್ನು ಭರ್ತಿ ಮಾಡಿ. ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಹೆಸರಿನಲ್ಲಿ ಕಳುಹಿಸಬೇಕು.
10. ವಿಳಾಸ - Bureau of Pharma Public Sector Undertakings of India (BPPI), 8th Floor Videocon Tower, Block E1 Jhandewalan Extension, New Delhi –110055. Tel – 011-49431800.