PMKVY: ಉಚಿತವಾಗಿ ಬಿಸಿನೆಸ್ ಕೌಶಲ್ಯಗಳನ್ನು ಕಲಿತು ಸರ್ಕಾರದಿಂದ ಪಡೆಯಿರಿ 1.5 ಲಕ್ಷ ರೂ.ವರೆಗೆ ಸಾಲ
ಕೌಶಲ್ಯ ಅಭಿವೃದ್ಧಿ ಸಚಿವ ಮಹೇಂದ್ರ ನಾಥ್ ಪಾಂಡೆ ಅವರ ಪ್ರಕಾರ ಈ ಬಾರಿ ಜಿಲ್ಲಾ ಮಟ್ಟದ ಕೌಶಲ್ಯ ಸಮಿತಿಗಳನ್ನು ಬಲಪಡಿಸಲು ಒತ್ತು ನೀಡಲಾಗಿದೆ. ನಾವು ಪಿಎಂಕೆವಿವೈ ಮೊದಲ ಮತ್ತು ಎರಡನೇ ಹಂತವನ್ನು ಪ್ರಾರಂಭಿಸಿದ್ದೇವೆ ಮತ್ತು ಈಗ ಅದರ ಮೂರನೇ ಹಂತವನ್ನು ಒಂದು ತಿಂಗಳಲ್ಲಿ ಪ್ರಾರಂಭಿಸಲಿದ್ದೇವೆ ಎಂದು ವಿವರಿಸಿರುವ ಸಚಿವರು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಸ್ಥಳೀಯ ಕೌಶಲ್ಯ ಅಗತ್ಯಗಳನ್ನು ಪೂರೈಸಲು ಮೂರನೇ ಹಂತದಲ್ಲಿ ಜಿಲ್ಲಾ ಮಟ್ಟದ ಕೌಶಲ್ಯ ಸಮಿತಿಗಳನ್ನು ಬಲಪಡಿಸಲು ಗಮನ ಹರಿಸಲಾಗಿದೆ. ಸರ್ಕಾರ ಪಿಎಂಕೆವಿವೈ ಮೊದಲ ಹಂತವನ್ನು 2015 ರಲ್ಲಿ ಮತ್ತು ಎರಡನೇ ಹಂತವನ್ನು 2016 ರಲ್ಲಿ ಪ್ರಾರಂಭಿಸಿತು. ಇದರ ಅಡಿಯಲ್ಲಿ 1 ಕೋಟಿ ಜನರ ಕೌಶಲ್ಯ ಅಭಿವೃದ್ಧಿಯ ಗುರಿಯನ್ನು ನಿಗದಿಪಡಿಸಲಾಗಿದೆ.
ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದ ತರಬೇತಿಯನ್ನು ದೇಶದ ಯುವಕರಿಗೆ ನೀಡುವುದು ಪಿಎಂಕೆವಿವೈ ಉದ್ದೇಶವಾಗಿದೆ. ಇದು ಅವರಿಗೆ ಉದ್ಯೋಗ ಒದಗಿಸಲು ಸಹಾಯ ಮಾಡುತ್ತದೆ. ಪಿಎಂಕೆವಿವೈ ಅಡಿಯಲ್ಲಿ ಯುವಕರಿಗೆ ತರಬೇತಿ ನೀಡಲು ಸರ್ಕಾರವೇ ಶುಲ್ಕ ಪಾವತಿಸುತ್ತದೆ.
ಇದನ್ನೂ ಓದಿ: PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ
ಪಿಎಂಕೆವಿವೈನಲ್ಲಿ ಅರ್ಜಿ ಸಲ್ಲಿಸಲು ಹೆಸರು, ವಿಳಾಸ ಮತ್ತು ಇಮೇಲ್ ಮಾಹಿತಿಯನ್ನು http://pmkvyofficial.org ನಲ್ಲಿ ಭರ್ತಿ ಮಾಡಬೇಕು. ಇದರ ನಂತರ ಅರ್ಜಿದಾರನು ತಾನು ತರಬೇತಿ ನೀಡಲು ಬಯಸುವ ತಾಂತ್ರಿಕ ಕ್ಷೇತ್ರವನ್ನು ಆರಿಸಬೇಕಾಗುತ್ತದೆ.
ಇದನ್ನೂ ಓದಿ: ಇಂದು 100ನೇ ಕಿಸಾನ್ ರೈಲಿಗೆ ಪ್ರಧಾನ ಮಂತ್ರಿ ಮೋದಿಯಿಂದ ಹಸಿರು ನಿಶಾನೆ
ಪಿಎಂಕೆವಿವೈ ಯೋಜನೆಯಡಿಯಲ್ಲಿ ನಿರ್ಮಾಣ, ಎಲೆಕ್ಟ್ರಾನಿಕ್ಸ್, ಯಂತ್ರಾಂಶ, ಆಹಾರ ಸಂಸ್ಕರಣೆ, ಪೀಠೋಪಕರಣಗಳು ಮತ್ತು ಫಿಟ್ಟಿಂಗ್ಗಳು, ಕರಕುಶಲ ವಸ್ತುಗಳು, ರತ್ನಗಳ ಆಭರಣಗಳು ಮತ್ತು ಚರ್ಮದ ತಂತ್ರಜ್ಞಾನದಂತಹ ಸುಮಾರು 40 ತಾಂತ್ರಿಕ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಆದ್ಯತೆಯ ತಾಂತ್ರಿಕ ಕ್ಷೇತ್ರದ ಜೊತೆಗೆ, ತಾಂತ್ರಿಕ ಕ್ಷೇತ್ರವನ್ನೂ ಆಯ್ಕೆ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ತರಬೇತಿ ಕೇಂದ್ರವನ್ನು ನೀವು ಆರಿಸಬೇಕಾಗುತ್ತದೆ.
ಈ ಯೋಜನೆಯಡಿ ನಿಮ್ಮ ಇಚ್ಚೆಯ ಯಾವುದೇ ತರಬೇತಿಯನ್ನು ಪಡೆಯಲು ನೀವು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಬದಲಿಗೆ ತರಬೇತಿ ವೇಳೆ ಸರ್ಕಾರವೇ ನಿಮಗೆ 8000 ರೂಪಾಯಿಗಳನ್ನು ನೀಡುತ್ತದೆ. ಪಿಎಂಕೆವಿವೈ 3 ತಿಂಗಳು, 6 ತಿಂಗಳು ಮತ್ತು 1 ವರ್ಷಕ್ಕೆ ನೋಂದಾಯಿಸುತ್ತದೆ. ಕೋರ್ಸ್ ನಂತರ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವು ದೇಶಾದ್ಯಂತ ಮಾನ್ಯವಾಗಿರಲಿದೆ. ಪಿಎಂಕೆವಿವೈನಲ್ಲಿ ತರಬೇತಿ ಪಡೆದ ನಂತರ ಸರ್ಕಾರವು ಕಡಿಮೆ ಸಾಲದೊಂದಿಗೆ ಕೆಲಸ ಪಡೆಯಲು ಸಹಕರಿಸುತ್ತದೆ.