PMMVY: ಮನೆಯಲ್ಲಿ ಮಗು ಹುಟ್ಟಿದರೆ Modi Govt ನೀಡುತ್ತದೆ ಧನ ಸಹಾಯ, ಹೇಗೆ ಅರ್ಜಿ ಸಲ್ಲಿಸಬೇಕು?
1. ಜನವರಿ 1, 2017ರಲ್ಲಿ ಈ ಯೋಜನೆ ಆರಂಭಗೊಂಡಿದೆ - ಕೇಂದ್ರ ಸರ್ಕಾರ ನಡೆಸುತ್ತಿರುವ ಈ ಯೋಜನೆಯ ಹೆಸರು 'ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ' (Pradhan Mantri Matritva Vandana Yojana). ಇದರ ಅಡಿಯಲ್ಲಿ 5000 ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈ ಯೋಜನೆಯನ್ನು 1 ಜನವರಿ 2017 ರಂದು ಪ್ರಾರಂಭಿಸಲಾಗಿದೆ.
2. ಯಾರಿಗೆ ಈ ಸಹಾಯಧನ ಒದಗಿಸಲಾಗುತ್ತದೆ? - 'ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ' ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು 'ಪ್ರಧಾನ ಮಂತ್ರಿ ಗರ್ಭಾವಸ್ಥೆಯ ನೆರವು ಯೋಜನೆ' ಎಂದೂ ಕೂಡ ಕರೆಯಲಾಗುತ್ತದೆ.
3. ಮೂರು ಕಂತುಗಳಲ್ಲಿ ಈ ಹಣ ನೀಡಲಾಗುತ್ತದೆ - ಯೋಜನೆಯ ಲಾಭ ಪಡೆಯಲು, ಮೊದಲ ಬಾರಿಗೆ ಗರ್ಭವತಿಯಾದಾಗ ನೋಂದಣಿಗಾಗಿ, ಗರ್ಭಿಣಿ ಮತ್ತು ಅವರ ಪತಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಫೋಟೋಸ್ಟಾಟ್ ಹೊಂದಿರುವುದು ಅವಶ್ಯಕ. ಬ್ಯಾಂಕ್ ಖಾತೆ ಜಂಟಿಯಾಗಿರಬಾರದು. ಯೋಜನೆಯಡಿ ಗರ್ಭಿಣಿಯರಿಗೆ 3 ಕಂತುಗಳಲ್ಲಿ 5000 ರೂ. ಸಹಾಯ ಧನ ಒದಗಿಸಲಾಗುತ್ತದೆ.
4.ಮಹಿಳೆಯರ ಖಾತೆಗೆ ನೇರ ಹಣ ವರ್ಗಾವಣೆ - ಮೊದಲ ಬಾರಿಗೆ ತಾಯಿಯಾಗುವ ಮಹಿಳೆಗೆ ಪೋಷಣೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ 5000 ರೂ.ಗಳಲ್ಲಿ ಮೊದಲ ಕಂತು 1000 ರೂ.ಗಳದ್ದಾಗಿದ್ದರೆ, ಎರಡನೇ ಕಂತು 2000 ರೂ.ಗಳು ಮತ್ತು ಮೂರನೇ ಕಂತು 2000 ರೂ.ಗಳದ್ದಾಗಿರುತ್ತದೆ. ಸರ್ಕಾರಿ ನೌಕರಿಯಲ್ಲಿ ನಿರತರಾಗಿರುವ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಈ ಯೋಜನೆಯಲ್ಲಿ ಹಣ ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು? - ನೀವು ASHA ಅಥವಾ ANM ಮೂಲಕ PM Matritva Vandana Yojana ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿಯೇ ಆಗಲಿ, ಯೋಜನೆಯ ಪ್ರಯೋಜನವನ್ನು ಎಲ್ಲಾ ಮಹಿಳೆಯರಿಗೆ ಒದಗಿಸಲಾಗುತ್ತದೆ.