ತಯಾರಿಸುವುದು ಸುಲಭ, ತೂಕ ಇಳಿಕೆಗೂ ಸಹಕಾರಿ: ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?
ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳಲ್ಲಿ ಅವಲಕ್ಕಿಯೂ ಕೂಡ ಒಂದು. ಉಪಹಾರದಲ್ಲಿ ಬಹಳ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಆಹಾರಗಳಲ್ಲಿ ಅವಲಕ್ಕಿಯೂ ಒಂದು.
ಅವಲಕ್ಕಿಯಲ್ಲಿ ವಿಟಮಿನ್ ಬಿ 12, ಕಬ್ಬಿಣಾಂಶ ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿದ್ದು, ಬೆಳಗಿನ ಉಪಹಾರದಲ್ಲಿ ಇದರ ಸೇವನೆಯು ಒಟ್ಟಾರೆ ಆರೋಗ್ಯಕ್ಕೆ ವರದಾನ ಎಂತಲೇ ಹೇಳಬಹುದು.
ಅವಲಕ್ಕಿ ಸುಲಭವಾಗಿ ಜೀರ್ಣವಾಗುವ ಆಹಾರ. ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
ಅವಲಕ್ಕಿ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿರುವ ಆಹಾರವಾಗಿರುವುದರಿಂದ ಇದು ತೂಕ ಇಳಿಕೆಯಲ್ಲಿ ಪ್ರಯೋಜನಕಾರಿ ಆಗಿದೆ.
ಅವಲಕ್ಕಿಯಲ್ಲಿ ಕಾರ್ಬೊಹೈಡ್ರೇಟ್ ಗಳು ಮತ್ತು ಪ್ರೊಟೀನ್ ಹೇರಳವಾಗಿದ್ದು ಇದು ಚಯಾಪಚಯವನ್ನು ಸುಧಾರಿಸುತ್ತದೆ.
ಅವಲಕ್ಕಿ ಅಕ್ಕಿ ಆಧಾರಿತ ಆಹಾರವಾಗಿರುವುದರಿಂದ ತ್ವರಿತ ಶಕ್ತಿಯನ್ನು ನೀಡುವ ಉತ್ತಮ ಮೂಲವಾಗಿದೆ.
ಅವಲಕ್ಕಿ ವಿಟಮಿನ್ ಬಿ1 ಅನ್ನು ಒದಗಿಸುವುದರಿಂದ ಇದು ಬ್ಲಡ್ ಶುಗರ್ ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.