ದಾಳಿಂಬೆಯನ್ನು ಇದರ ಜೊತೆ ಅರೆದು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು ಗ್ಯಾರಂಟಿ !
ಮಧುಮೇಹ ವಿರೋಧಿ ಗುಣಗಳು ಅನೇಕ ಹಣ್ಣುಗಳು,ತರಕಾರಿಗಳು ಮತ್ತು ಗಿಡಮೂಲಿಕೆಗಳಲ್ಲಿ ಕಂಡುಬರುತ್ತವೆ.ಈ ಅಂಶಗಳು ದೇಹದಲ್ಲಿ ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದಾಳಿಂಬೆಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಹಣ್ಣಾಗಿದೆ. ಈ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ದಾಳಿಂಬೆಯನ್ನು ಕೆಲವು ಸಾಮಗ್ರಿಗಳ ಜೊತೆಗೆ ಬೆರೆಸಿ ಅರೆದು ಚಟ್ನಿ ತಯಾರಿಸಿಕೊಳ್ಳಬೇಕು. ಈ ಚಟ್ನಿ ಸೇವಿಸಿದರೆ ಬ್ಲಡ್ ಶುಗರ್ ಸರಾಗವಾಗಿ ಕಡಿಮೆಯಾಗುವುದು.
ಟೊಮೇಟೊ 1 , 1 ಈರುಳ್ಳಿ, 3-4 ಹಸಿ ಬೆಳ್ಳುಳ್ಳಿ, ಟೀಸ್ಪೂನ್ ದಾಳಿಂಬೆ ಬೀಜಗಳು, 8-10 ಕರಿಬೇವಿನ ಎಲೆಗಳು, 3-4 ದೊಡ್ಡ ಪತ್ರೆ, 4-5 ತುಳಸಿ ಎಲೆಗಳು, 3 ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಂತೆ ಉಪ್ಪು
ಎಲ್ಲಾ ಮಸಾಲೆಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.ಟೊಮೆಟೊಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ.ಸ್ವಲ್ಪ ನೀರು ಮಿಶ್ರಣ ಮಾಡಿ ಚಟ್ನಿಯನ್ನು ರುಬ್ಬಿಕೊಳ್ಳಿ.
ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ಈ ಚಟ್ನಿಯನ್ನು ಸೇವಿಸಿ. ನಿಯಮಿತವಾಗಿ ಈ ಚಟ್ನಿಯನ್ನು ಸೇವಿಸುತ್ತಾ ಬಂದರೆ ಬ್ಲಡ್ ಶುಗರ್ ಇಳಿಯುವುದು ಖಂಡಿತಾ ಎಂದು ಹೇಳಲಾಗುತ್ತದೆ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.