ಈ ಸಿಹಿ ಹಣ್ಣು ಮಧುಮೇಹಕ್ಕೆ ಮದ್ದು.. ಊಟದ ಮೊದಲು ತಿಂದರೆ ಶುಗರ್ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ !
ಮಧುಮೇಹದಿಂದ ಬಳಲುತ್ತಿರುವವರು ಯಾವುದೇ ಆಹಾರ ಸೇವಿಸುವಾಗ ಎಚ್ಚರಿಕೆಯಿಂದ ಇರಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುವ ಆಹಾರವನ್ನೇ ತಿನ್ನಬೇಕು.
ಮಧುಮೇಹವನ್ನು ನಿಯಂತ್ರಣಕ್ಕೆ ತರದಿದ್ದರೆ ಮೂತ್ರಪಿಂಡ ಮತ್ತು ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾದ ಹಣ್ಣು ಒಂದಿದೆ. ಇದು ರುಚಿಯಲ್ಲೂ ಸಿಹಿಯಾಗಿದೆ.
ದಾಳಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ, ಫೈಬರ್, ಒಮೆಗಾ -6 ಕೊಬ್ಬಿನಾಮ್ಲಗಳು, ಆಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು, ಫಿನಾಲಿಕ್ಸ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸತು ಕಂಡು ಬರುತ್ತದೆ.
ದಾಳಿಂಬೆ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮಧುಮೇಹ ರೋಗಿಗಳಿಗೆ ವರದಾನವಿದ್ದಂತೆ. ದಾಳಿಂಬೆಯಲ್ಲಿ ನಾರಿನಂಶ ಹೇರಳವಾಗಿದೆ.
ದಾಳಿಂಬೆಯನ್ನು ಜ್ಯೂಸ್ ಮಾಡಿ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ದಾಳಿಂಬೆ ಹಣ್ಣನ್ನು ನೇರವಾಗಿ ಮಧ್ಯಾಹ್ನದ ಊಟಕ್ಕೂ ಮುನ್ನ ಸೇವಿಸುವುದರಿಂದ ಬ್ಲಡ್ ಶುಗರ್ ಏರುಪೇರಾಗುವುದಿಲ್ಲ.
ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.