ಯಾವ ಪಥ್ಯವೂ ಬೇಡ.. ಈ ಹಣ್ಣಿನ ಜ್ಯೂಸ್‌ ಕುಡಿದ್ರೆ ಸಾಕು ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್! ಮತ್ತೆ ಯಾವತ್ತೂ ಹೆಚ್ಚಾಗಲ್ಲ..

Mon, 18 Nov 2024-12:55 pm,

ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಅಥವಾ ಶುಗರ್ ಕಾಯಿಲೆ ಬರುತ್ತದೆ. ಈ ರೋಗಕ್ಕೆ ನಿಖರವಾದ ಔಷಧಿಯಿಲ್ಲ.. ಇದನ್ನು ನಿಯಂತ್ರಿಸಬಹುದು ಆದರೇ ಸಂಪೂರ್ಣವಾಗಿ ವಾಸಿಮಾಡಲಾಗುವುದಿಲ್ಲ.. ಹಾಗಾದ್ರೆ ಈ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸುವುದು ಹೇಗೆ?   

ದಾಳಿಂಬೆ ರಸವು ಕೇವಲ 3 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಜ್ಯೂಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ.. ಇದು ಗ್ರೀನ್‌ ಟೀಗಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಈ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ..  

ದಾಳಿಂಬೆ ರಸವು ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಸ್ನಾಯುಗಳು ಮತ್ತು ಯಕೃತ್ತಿನ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯಿಸದಿದ್ದಾಗ ಮತ್ತು ರಕ್ತದಿಂದ ಗ್ಲೂಕೋಸ್ ಅನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಇನ್ಸುಲಿನ್ ಪ್ರತಿರೋಧವು ಸಂಭವಿಸುತ್ತದೆ. ಆ ವೇಳೆ ರಕ್ತದಲ್ಲಿನ ಗ್ಲೂಕೋಸ್‌ನ ಹೆಚ್ಚಿನ ಮಟ್ಟವು ಮಾರಕವಾಗಬಹುದು.    

ದಿನಕ್ಕೆ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದು ಒಳ್ಳೆಯದು. ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದಾಳಿಂಬೆ ಜ್ಯೂಸ್‌ಗಳು ಲಭ್ಯವಿವೆ. ಮಾರುಕಟ್ಟೆಯಲ್ಲಿ ಈ ಜ್ಯೂಸ್ ಖರೀದಿಸುವ ಮುನ್ನ ಕಲಬೆರಕೆ ಇಲ್ಲದ ಜ್ಯೂಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆದರೆ ಈ ಜ್ಯೂಸ್ ಕುಡಿಯುವ ಮೊದಲು, ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.  

ಅಧ್ಯಯನದ ಪ್ರಕಾರ, ದಾಳಿಂಬೆ ರಸವನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಈ ಅಧ್ಯಯನದಲ್ಲಿ, 12 ಗಂಟೆಗಳ ಕಾಲ ಉಪವಾಸ ಮಾಡಿದ 85 ಮಧುಮೇಹ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.   

1.5 ಮಿಲಿ ದಾಳಿಂಬೆ ರಸವನ್ನು ಸೇವಿಸಿದ ಮೂರು ಗಂಟೆಗಳ ನಂತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಮೂರು ಗಂಟೆಗಳ ನಂತರ ತೆಗೆದುಕೊಂಡ ಮಾದರಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link