ಈ ಹಣ್ಣಿನ ಸಿಪ್ಪೆ ಬೇಯಿಸಿದ ನೀರು ಕುಡಿದರೆ ದುಂಡು ಹೊಟ್ಟೆ ವಾರದಲ್ಲಿಯೇ ಚಪ್ಪಟ್ಟೆಯಾಗುವುದು !ಕ್ಯಾನ್ಸರ್ ನಿಂದಲೂ ನೀಡುವುದು ಮುಕ್ತಿ

Fri, 18 Oct 2024-10:57 am,

ತೂಕ ಹೆಚ್ಚಾಗುವಾಗ ದೇಹದ ಕೊಬ್ಬು ಸೇರಿಕೊಳ್ಳುವುದೇ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ. ಇದು ದೇಹದ ಸೌಂದರ್ಯವನ್ನು ಸಂಪೂರ್ಣವಾಗಿ ಕೆಡಿಸುತ್ತದೆ.   

ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುವುದು ಕಷ್ಟ ಎಂದು ಹೇಳುತ್ತಾರೆ. ಆದರೆ ಅಸಾಧ್ಯ ಖಂಡಿತಾ ಅಲ್ಲ. ಈ ಹಣ್ಣಿನ ಸಿಪ್ಪೆಯೇ ಸಾಕು ಸೊಂಟ ಮತ್ತು ಹೊಟ್ಟೆ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಲು. 

ದಾಳಿಂಬೆಯ ದಪ್ಪ ಸಿಪ್ಪೆಗಳ ಸಹಾಯದಿಂದ, ಈ ಹಣ್ಣಿನ ಗುಣಗಳು ಮತ್ತು ಅದರ ಅಂಶಗಳನ್ನು ಸಂರಕ್ಷಿಸಲಾಗುತ್ತದೆ. ದಾಳಿಂಬೆಯನ್ನು ತಿನ್ನುವ ಮೊದಲು,ಈ ಸಿಪ್ಪೆಗಳನ್ನು ತೆಗೆದು ಎಸೆಯಲಾಗುತ್ತದೆ. ಆದರೆ ಈ ಹಣ್ಣಿನಷ್ಟೇ ಗುಣಕಾರಿ ಇದರ ಸಿಪ್ಪೆ.   

ದಾಳಿಂಬೆ ಹಣ್ಣಿನ ಸಿಪ್ಪೆಗಳಿಂದ ಪರಿಣಾಮಕಾರಿ ಮತ್ತು ರುಚಿಕರವಾದ ಗಿಡಮೂಲಿಕೆ ಚಹಾವನ್ನು ತಯಾರಿಸಬಹುದು.ಈ ಚಹಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸುತ್ತದೆ.

ಸ್ಥೂಲಕಾಯದಿಂದ ಬಳಲುತ್ತಿರುವವರು ರಿಗೆ ದಾಳಿಂಬೆ ಸಿಪ್ಪೆಯ ಚಹಾ ಕುಡಿಯುವುದರಿಂದ ದೇಹದಲ್ಲಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ . ಇದರೊಂದಿಗೆ ತೂಕ ನಷ್ಟ ಬಹಳ ವೇಗವಾಗಿ ಆಗುತ್ತದೆ.   

ದಾಳಿಂಬೆ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಇದ್ದು, ಇದು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಈ ಚಹಾವನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.  

ದಾಳಿಂಬೆ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ದಾಳಿಂಬೆ ಸಿಪ್ಪೆಗಳು ಸಂಪೂರ್ಣವಾಗಿ ಒಣಗಿದಾಗ,ಅವುಗಳನ್ನು ಪುಡಿಮಾಡಿ. ಈ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ನಂತರ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.  

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link