ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಪತಿ ಜೊತೆ ʻಕವಿಶೈಲʼಕ್ಕೆ ತೆರೆಳಿದ ಪೂಜಾ ಗಾಂಧಿ!
ನಟಿ ಪೂಜಾ ಗಾಂಧಿ ಕಳೆದ ತಿಂಗಳ ನವೆಂಬರ್ 29 ರಂದು ವಿಶ್ವಮಾನವತೆ ಸಾರಿದ ರಾಷ್ಟ್ರಕವಿ ಕುವೆಂಪು ಆಶಯದಂತೆ ಇತ್ತೀಚೆಗೆ ಉದ್ಯಮಿ ವಿಜಯ್ ಘೋರ್ಪಡೆ ಅವರ ಜತೆಗೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ನಟಿ ಪೂಜಾ ಗಾಂಧಿ ಕುವೆಂಪು ಅವರ ಮನೆ ಕುಪ್ಪಳಿಗೆ ಭೇಟಿ ನೀಡಿ ಕವಿಶೈಲದ ಮಡಿಲಿನಲ್ಲಿ ಕಾಲ ಕಾಳೆದಿದ್ದಾರೆ.
ನಟಿ ಪೂಜಾ ಮದುವೆಯಾದ ತಕ್ಷಣ ತಮ್ಮ ಹನಿಮೂನ್ ಅಥವಾ ಪ್ರವಾಸಕ್ಕಾಗಿ ವಿದೇಶವನ್ನು ಆಯ್ಕೆ ಮಾಡಿಕೊಳ್ಳದೇ, ತಮ್ಮ ಪತಿ ವಿಜಯ್ ಘೋರ್ಪಡೆ ಜೊತೆಗೆ ಕುವೆಂಪು ಹುಟ್ಟಿ ಬೆಳೆದ ಜಾಗ ಕುಪ್ಪಳ್ಳಿಗೆ ಭೇಟಿ ನೀಡಿದ್ದಾರೆ.
ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಅಪ್ಪಟ ಕನ್ನಡತಿಯಂತೆ ಸೀರೆಯುಟ್ಟು ಪತಿಯ ಕೈ ಹಿಡಿದು ರಾಷ್ಟ್ರಕವಿ ಮನೆಯ ಸುತ್ತಮುತ್ತಾ ಓಡಾಡುತ್ತ ಕಾಲ ಕಳೆದಿದ್ದಾರೆ.
ಪೂಜಾ ಗಾಂಧಿ ಕವಿಶೈಲಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ತಮ್ಮ ಸರಳತೆ, ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈಗ ಮತ್ತೆ ಕುವೆಂಪು ಮನೆಯಲ್ಲಿ ಕುಳಿತು ಕನ್ನಡಿಗರ ಮನಗೆದ್ದಿದ್ದಾರೆ.
ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ಹೊರ ಹಾಕಿದ್ದಾರೆ.
ಇತ್ತೀಚೆಗೆ ಕನ್ನಡ ಓದಲು, ಬರೆಯಲು ಹಾಗೂ ಕನ್ನಡ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುತ್ತಿದ್ದ ನಟಿ ಪೂಜಾ ಗಾಂಧಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಆಕ್ಟಿವ್ ಆಗಿದ್ದು, ತಮ್ಮ ಮದುವೆಗೆ ತಮ್ಮ ಕೈಯಿಂದಲೆ ಆಹ್ವಾನ ಪತ್ರಿಕೆ ಬರೆದಿದ್ದುದು ಸಹ ಸಕತ್ ವೈರಲ್ ಆಗಿತ್ತು.