18ರ ಹರೆಯದಲ್ಲಿ ಟೀಂ ಇಂಡಿಯಾಗೆ ಸವಾಲ್ ಹಾಕಿದ್ದ ಈ ನಟಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ…!
ಪೂನಂ ಪಾಂಡೆ ಸ್ಕ್ರೀನ್ ಮೇಲೆ ಹೇಳಿಕೊಳ್ಳುವಂತಹದ್ದೇನು ಮಾಡದಿದ್ರೂ ಬೋಲ್ಡ್ ನೆಸ್ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇನ್ನು ಪೂನಂ ನೀಡಿದ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿತ್ತು.
ಪೂನಂ ಪಾಂಡೆ ಬಿ-ಟೌನ್ನಲ್ಲಿ ಜನಪ್ರಿಯ ಹೆಸರು ಪಡೆದಿದ್ದಾರೆ. ಅವರು ತಮ್ಮ ನಟನೆಯ ಹೊರತಾಗಿ ವಿವಾದಗಳಿಂದಾಗಿ ಸಾಕಷ್ಟು ಸುದ್ದಿ ಮಾಡಿದ್ದಾರೆ. 2011 ರಲ್ಲಿ, ಭಾರತ ವಿಶ್ವಕಪ್ ಗೆದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ನಗ್ನವಾಗುವುದಾಗಿ ಹೇಳಿಕೆಯೊಂದನ್ನು ನೀಡಿದ್ದರು.
ಆದರೆ ಪೂನಂ ಪಾಂಡೆ ಹೇಳಿಕ ಅವರಿಗೇ ಮುಳುವಾಯಿತು. ಇಂತಹ ಹೇಳಿಕೆ ನೀಡಿದ್ದೇ ತಡ, ಮನೆಯಲ್ಲಿ ಸಾಕಷ್ಟು ಗಲಾಟೆಯನ್ನು ಸೃಷ್ಟಿಯಾಗಿತ್ತಂತೆ. ಆಕೆಯ ತಾಯಿ ಅವರಿಗೆ ಪೆಟ್ಟುಕೊಟ್ಟರೆ, ತಂದೆ ತುಂಬಾ ಅಸಮಾಧಾನಗೊಂಡರಂತೆ,
ಮತ್ತೊಂದೆಡೆ, ಭಾರತ 2011ರಲ್ಲಿ ವಿಶ್ವಕಪ್ ಗೆದ್ದಾಗ ಪೂನಂ ಪಾಂಡೆ ಕೂಡ ಭಯಗೊಂಡರು. ಈಗ ಅವರು ನೀಡಿದ ಹೇಳಿಕೆಯನ್ನು ಪೂರ್ಣ ಮಾಡಬೇಕಾಗಬಹುದು ಎಂದು ಅವರು ಭಾವಿಸಿದ್ದರಂತೆ.
ಈ ಒಂದು ಹೇಳಿಕೆ ಪೂನಂ ಪಾಂಡೆಗೆ ತುಂಬಾ ಬೋಲ್ಡ್ ನಟಿ ಎಂಬ ಟ್ಯಾಗ್ ಅನ್ನು ನೀಡಿತು. ಅಂದಿನಿಂದ ಇಲ್ಲಿಯವರೆಗೆ ಈ ಟ್ಯಾಗ್ ಅವರ ಬೆನ್ನು ಬಿಟ್ಟಿಲ್ಲ. ಈ ವಿವಾದಾತ್ಮಕ ಹೇಳಿಕೆಯ ಲಾಭ ಪೂನಂಗೂ ಸಿಕ್ಕಿದೆ. ಅವರಿಗೆ ಅನೇಕ ಸಿನಿಮಾ ಆಫರ್ಗಳು ಬಂದರೂ ಸಹ, ಪ್ರತಿ ಚಿತ್ರದಲ್ಲೂ ಅವರ ಪಾತ್ರ ಬೋಲ್ಡ್ ನೆಸ್ ಆಗಿಯೇ ಇರುತ್ತಿತ್ತು.
ಕಳೆದ ವರ್ಷ ರಿಯಾಲಿಟಿ ಶೋ ಲಾಕಪ್’ನಲ್ಲಿ ಕಾಣಿಸಿಕೊಂಡ ನಂತರ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.