ಪತಿಯ ಎದುರೇ ಆ್ಯಂಕರ್ ಅನಸೂಯಾ ಈ ನಟನೊಂದಿಗೆ ಮಾಡಿದ್ದೇನು ನೋಡಿ... ಫೋಟೋಸ್ ವೈರಲ್ !
ಇತ್ತೀಚೆಗೆ ಅನಸೂಯಾ ಅವರು ತಮ್ಮ ಪತಿ ಭಾರದ್ವಾಜ್ ಜೊತೆ ಕಿರುತೆರೆ ಕಲಾವಿದ ನಿಖಿಲ್ ವಿಜಯೇಂದ್ರ ಸಿಂಹ ಅವರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಈ ಸಮಯದ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅನಸೂಯಾ ತನ್ನ ಪತಿ ಭಾರದ್ವಾಜ್ ಜೊತೆ ಪಾರ್ಟಿಯಲ್ಲಿ ಇದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೇ ಈ ಫೋಟೋಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್ ವಿಜಯೇಂದ್ರ ಸಿಂಹ ಅವರಿಗೆ ಕೇಕ್ ತಿನ್ನಿಸಿ ಕೈ ಹಿಡಿದಿದ್ದಾರೆ. ಈ ಫೋಟೋವನ್ನೇ ಟ್ರೋಲ್ ಮಾಡಲಾಗುತ್ತಿದೆ.
ಅನಸೂಯಾ ತನ್ನ ಪತಿಯ ಎದುರೇ ತನ್ನ ಸ್ನೇಹಿತನೊಂದಿಗೆ ತುಂಬಾ ಕ್ಲೋಸ್ ಆಗಿ ನಡೆದುಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ಕೆಲವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅನಸೂಯಾ ವೆಬ್ ಸಿರೀಸ್ ಮತ್ತು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆಂಕರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ ಸ್ಟಾರ್ ನಟಿಯಾದರು.
ಉದ್ಯಮದಲ್ಲಿ ಅನೇಕ ಸ್ನೇಹಿತರನ್ನು ಗಳಿಸಿದರು. ಹೀಗಾಗಿ ವೀಕೆಂಡ್, ಬರ್ತ್ ಡೇ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.