64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌

Mon, 21 Oct 2024-4:44 pm,

ನಟಿ ಜಯಸುಧಾ ಕನ್ನಡದಲ್ಲಿಯೂ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್‌ ಹೀರೋಯಿನ್‌ ಆಗಿದ್ದ ಇವರು, ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು.

ನಟಿ ಜಯಸುಧಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಅವರ ಸಹೋದರನನ್ನು ನಟಿ ಜಯಸುಧಾ ವಿವಾಹವಾದರು. ಆದರೆ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು.

1985 ರಲ್ಲಿ ನಟಿ ಜಯಸುಧಾ ನಟ ಜೀತೇಂದ್ರ ಅವರ ಸೋದರಸಂಬಂಧಿ ನಿರ್ಮಾಪಕ ನಿತಿನ್ ಕಪೂರ್ ಜೊತೆ ಎರಡನೇ ಬಾರಿ ಮದುವೆಯಾದರು ಎನ್ನಲಾಗುತ್ತದೆ.  

ಜಯಸುಧಾ ಮತ್ತು ನಿತಿನ್ ಕಪೂರ್ ದಂಪತಿಗೆ ನಿಹಾರ್ ಮತ್ತು ಶ್ರೇಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಟಾಲಿವುಡ್‌ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. 

ಆದರೆ ನಿತಿನ್ ಕಪೂರ್ 2017 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ನಟಿ ಜಯಸುಧಾ ಒಬ್ಬರೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ತೆಲುಗಿನ ಜನಪ್ರಿಯ ನಟಿ ಜಯಸುಧಾ 64 ನೇ ವಯಸ್ಸಿನಲ್ಲಿ ಮತ್ತೊಮ್ಮೆ ವಿವಾಹವಾದರು ಎಂಬ ವದಂತಿಯೊಂದು ಹಬ್ಬಿತ್ತು.  

ನಟಿ ಜಯಸುಧಾ ವಿದೇಶಿ ಉದ್ಯಮಿ ಜೊತೆ ಮೂರನೇ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿ ತೀವ್ರ ಚರ್ಚೆಗೆ ಕಾರಣವಾಗಿತ್ತು. 

ಆದರೆ ಈ ವದಂತಿಯ ಬಗ್ಗೆ ಜಯಸುಧಾ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ. ಹೀಗಾಗಿ ಇದು ಗಾಳಿ ಸುದ್ದಿ ಆಗಿಯೇ ಉಳಿದದ್ದು, ಸತ್ಯಾಸತ್ಯತೆ ಬಗ್ಗೆ ತಿಳಿದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link