South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !
ಜನಪ್ರಿಯ ನಟಿ ಜಯಸುಧಾ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಪ್ರಭಾವ ಬೀರಿದವರು.
ನಟಿ ಜಯಸುಧಾ ರಾಜಕಾರಣಿಯಾಗಿದ್ದು ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಅವರ ಸಹೋದರನನ್ನು ವಿವಾಹವಾದರು. ಆದರೆ ಈ ಮದುವೆಯು ವಿಚ್ಛೇದನದಲ್ಲಿ ಕೊನೆಗೊಂಡಿತು.
ಆ ಬಳಿಕ 1985 ರಲ್ಲಿ ನಟಿ ಜಯಸುಧಾ ನಟ ಜೀತೇಂದ್ರ ಅವರ ಸೋದರಸಂಬಂಧಿ ನಿರ್ಮಾಪಕ ನಿತಿನ್ ಕಪೂರ್ ಅವರನ್ನು ಎರಡನೇ ಮದುವೆಯಾದರು.
ಈ ದಂಪತಿಗೆ ನಿಹಾರ್ ಮತ್ತು ಶ್ರೇಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಟಾಲಿವುಡ್ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.
ನಿತಿನ್ ಕಪೂರ್ 2017 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ನಟಿ ಒಂಟಿ ಜೀವನ ನಡೆಸುತ್ತಿದ್ದರು.
ತೆಲುಗಿನ ಜನಪ್ರಿಯ ನಟಿ ಜಯಸುಧಾ ಅವರು ತಮ್ಮ 64 ನೇ ವಯಸ್ಸಿನಲ್ಲಿ ಮತ್ತೊಮ್ಮೆ ವಿವಾಹವಾಗಿದ್ದಾರೆ ಎನ್ನುವ ವದಂತಿ 2023 ರಲ್ಲಿ ಹಬ್ಬಿತ್ತು.
ವಿದೇಶಿ ಉದ್ಯಮಿ ಜೊತೆ ನಟಿ ಜಯಸುಧಾ ಮೂರನೇ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.