ʼಬಿಗ್ ಬಾಸ್ OTT 2ʼನಲ್ಲಿ ನೀಲಿ ಚಿತ್ರತಾರೆ ʼಮಿಯಾ ಖಲೀಫಾʼ..! ಫೋಟೋಸ್ ನೋಡಿ
ವಯಸ್ಕ ಚಲನಚಿತ್ರ ತಾರೆ ಮಿಯಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಇದೀಗ ಮಿಯಾ ಬಿಗ್ ಬಾಸ್ ಒಟಿಟಿ ಸೀಸನ್ 2ರ ಭಾಗವಾಗಬಹುದೆಂಬ ಸುದ್ದಿ ಹರಿದಾಡುತ್ತಿದ್ದು, ಇದು ನಿಜವಾಗಲಿ ದೇವರೇ ಅಂತ ಯುವಕರು ಪ್ರಾರ್ಥನೆ ಮಾಡುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಬಿಗ್‌ಬಾಸ್ ಆರಂಭದಲ್ಲಿ ಮಿಯಾ ಎಂಟ್ರಿ ನೀಡುವುದಿಲ್ಲ. ಆದರೆ ವೈಲ್ಡ್ ಕಾರ್ಡ್ ಮೂಲಕ ಶೋ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ OTT ಜೂನ್ 17 ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯೂ ಸಹ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ವೂಟ್ ನಲ್ಲಿ ಅಲ್ಲ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಅನ್ನು ನೋಡಬಹುದು.
ಸುಮಾರು 13 ಸ್ಪರ್ಧಿಗಳು ಈ ಬಾರಿ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಇದರಲ್ಲಿ ಟಿವಿ ತಾರೆಗಳಿಂದ ಹಿಡಿದು ಸಾಮಾಜಿಕ ಮಾಧ್ಯದದ ಸೆಲೆಬ್ರಿಟಿಗಳು ಸಹ ಇರಲಿದ್ದಾರೆ.
ಈ ಬಾರಿ ಶೋನಲ್ಲಿ ಅವಿನಾಶ್ ಸಚ್‌ದೇವ್, ಪಾಲಕ್ ಪುರಸ್ವಾನಿ, ಆಲಿಯಾ ಸಿದ್ದಿಕಿ, ಆಕಾಂಕ್ಷಾ ಪುರಿ, ಜಿಯಾ ಶಂಕರ್ ಮತ್ತು ಫಲಕ್ ನಾಜ್ ಅವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ.
ಸದ್ಯ 'ಬಿಗ್ ಬಾಸ್ OTT 2' ಮನೆಯ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಹೊಸ ವಿನ್ಯಾಸದೊಂದಿಗೆ ಬಿಗ್ ಬಾಸ್ OTT 2 ಮನೆಯ ಮೊದಲ ನೋಟ ವಿಶೇಷವಾಗಿದೆ.