ಈ ರಾಶಿಯಲ್ಲಿ ಚಂದ್ರ ಮಂಗಳ ಯೋಗ ! ಧನ ಕನಕ ಹರಿಸುವಳು ತಾಯಿ ಲಕ್ಷ್ಮೀ ! ತಡೆಯಿಲ್ಲದೆ ತಲುಪಬಹುದು ಗುರಿ
ಇಂದು ಬೆಳಿಗ್ಗೆ 11:36 ಕ್ಕೆ ಚಂದ್ರನು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳ ಗ್ರಹವು ಈಗಾಗಲೇ ಕನ್ಯಾರಾಶಿಯಲ್ಲಿದೆ. ಈ ಮೂಲಕ ಚಂದ್ರ ಮಂಗಳ ಯೋಗ ರೂಪುಗೊಂಡಿದೆ.
ಈ ಯೋಗದಿಂದ ಈ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಿಂದ ವ್ಯಕ್ತಿಯ ಮನೋಬಲ ಹೆಚ್ಚುತ್ತದೆ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ. ಆತ್ಮವಿಶ್ವಾಸ ಧೈರ್ಯದಿಂದ ಮುನ್ನಡೆಯುತ್ತಾರೆ.
ಮೇಷ ರಾಶಿ : ಮೇಷ ರಾಶಿಯ ಜನರು ಚಂದ್ರ ಮತ್ತು ಮಂಗಳ ಯೋಗದ ವಿಶೇಷ ಫಲ ಪಡೆಯುತ್ತಾರೆ. ಈ ಸಮಯದಲ್ಲಿ ಶತ್ರುಗಳ ಮೇಲೆ ವಿಜಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಆತ್ಮವಿಶ್ವಾಸದ ಬಲದ ಮೇಲೆ, ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸುವಿರಿ.
ಮಿಥುನ ರಾಶಿ : ಈ ರಾಶಿಯವರಿಗೆ ಆಸ್ತಿ, ಹಣ, ವಾಹನಗಳನ್ನು ಖರೀದಿಸುವ ಸೌಭಾಗ್ಯ ದೊರೆಯುತ್ತದೆ. ಪಾಲುದಾರಿಕೆಯಲ್ಲಿ ಮಾಡಿದ ವ್ಯವಹಾರದಲ್ಲಿಯೂ ಯಶಸ್ಸನ್ನು ಸಾಧಿಸುವಿರಿ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಬಹುದು.
ಕಟಕ ರಾಶಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಶತ್ರುಗಳ ಮೇಲೆ ಜಯ ದೊರೆಯಲಿದೆ. ಈ ಸಮಯವು ವೃತ್ತಿಜೀವನಕ್ಕೆ ಮಂಗಳಕರವಾಗಿದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಸಮಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.