ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ಪ್ರತಿ ತಿಂಗಳೂ ನಿಮಗೆ 9000 ರೂಪಾಯಿ ಸಿಗುತ್ತೆ!!
ಪೋಸ್ಟ್ ಆಫೀಸ್‌ನ ಈ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ರೆ ನಿವೃತ್ತಿಯ ನಂತರ ಹಣಕಾಸು ಸಮಸ್ಯೆಗಳನ್ನು ಎದುರಿಸದೇ, ವೃದ್ಧಾಪ್ಯದಲ್ಲೂ ವೈಫಲ್ಯಗಳನ್ನು ತಪ್ಪಿಸಬಹುದು. ಹೂಡಿಕೆ ಮಾಡುವ ಹಲವಾರು ಯೋಜನೆಗಳು ಇದ್ದರೂ ಸಹ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಒಂದು ಶ್ರೇಷ್ಠ ಆಯ್ಕೆಯಾಗಿದೆ.
ಈ ಯೋಜನೆಯು ಸರಳ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. ಈ ಸ್ಕೀಮ್‌ನಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನಿಮಗೆ ನಿರ್ದಿಷ್ಟ ಮತ್ತು ಖಾತರಿಯ ಆದಾಯವನ್ನು ಪಡೆಯಬಹುದು. ಇದು ವಿಶೇಷವಾಗಿ ನಿವೃತ್ತಿಯ ನಂತರದವರಿಗೆ ಸೂಕ್ತವಾಗಿದೆ. ಏಕೆಂದರೆ ಅವರು ಹೊಸ ಆದಾಯದ ಮೂಲದ ಬಗ್ಗೆ ಹುಡುಕುತ್ತಿರುತ್ತಾರೆ. ತಿಂಗಳು ತಿಂಗಳು ಒಂದಷ್ಟು ಹಣ ನಮ್ಮ ಕೈಸೇರಲಪ್ಪ ಅನ್ನೋರಿಗೆ ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ.
ಈ ಯೋಜನೆಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಿದ ಮೇಲೆ, ನಿರ್ದಿಷ್ಟ ಬಡ್ಡಿದರದ ಮೇಲೆ ತಿಂಗಳು ತಿಂಗಳು ಹಣ ಪಡೆಯಬಹುದು. ಈ ಯೋಜನೆಗೆ ಹೂಡಿಕೆ ಮತ್ತು ಮಾರುಕಟ್ಟೆ ಯಾವುದೂ ಸಹ ಸಂಬಂಧಿಸಿದುದಿಲ್ಲ. ಆದ್ದರಿಂದ ಇಲ್ಲಿ ನಿಮಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ. ಇದು ಕೇಂದ್ರ ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿದ್ದು, ನಿರ್ದಿಷ್ಟವಾದ ಆದಾಯವನ್ನು ನೀಡುತ್ತದೆ.
ಪೋಸ್ಟ್ ಆಫೀಸ್‌ನ ಈ ಮಾಸಿಕ ಆದಾಯ ಯೋಜನೆಯು ಎಲ್ಲರಿಗೂ ಲಭ್ಯವಿದೆ. ಮೂರು ಜನರು ಜಂಟಿಯಾಗಿಯೂ ಖಾತೆಯನ್ನು ತೆರೆಯಬಹುದು. ಹತ್ತು ವರ್ಷದ ಮಕ್ಕಳ ಹೆಸರಿನಲ್ಲಿ, ಅವರ ಪಾಲಕರ ಹೆಸರಿನಲ್ಲಿ ಖಾತೆ ತೆರೆಯಬಹುದು. ಇಲ್ಲಿ ನೀವು ಕನಿಷ್ಠ ₹1,000 ಹೂಡಿಕೆ ಮಾಡಬಹುದು. ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಲು ಅವಕಾಶವಿದೆ. ಜಂಟಿ ಖಾತೆಗೆ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಈ ಯೋಜನೆಯಡಿ ಪ್ರಸ್ತುತ ಬಡ್ಡಿ ದರವು 7.40% ಇದೆ. ಬಡ್ಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಯೋಜನೆಯ ಅವಧಿ ಐದು ವರ್ಷಗಳು, ಅಂದರೆ ನೀವು ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ₹5,550 ಪಡೆಯಬಹುದು. 15 ಲಕ್ಷ ರೂ.ನ ಜಂಟಿ ಖಾತೆ ತೆರೆದರೆ ಪ್ರತಿ ವ್ಯಕ್ತಿಗೆ ₹9,250 ಸಿಗುತ್ತದೆ.
ನಿಮ್ಮ ₹1 ಲಕ್ಷ ಹೂಡಿಕೆಗೆ ಪ್ರತಿ ತಿಂಗಳೂ ₹617 ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಯಾವುದೇ ಅಪಾಯವಿಲ್ಲದೆ ನಿರ್ಧಿಷ್ಟ ಮಾಸಿಕ ಆದಾಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪೋಸ್ಟ್ ಆಫೀಸ್ ಸಂಪರ್ಕಿಸಬಹುದು.