Post Office Schemes: ಅಂಚೆ ಕಚೇರಿಯ ಜಬರ್ದಸ್ತ್ ಯೋಜನೆಗಳು, ಯಾವ ಯೋಜನೆಯಲ್ಲಿ ಎಷ್ಟು ಅವಧಿಯಲ್ಲಿ ಹಣ ಡಬಲ್ ! ಇಲ್ಲಿದೆ ವಿವರ
1. ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (Post Office Time Deposit) - 1 ವರ್ಷದಿಂದ 3 ವರ್ಷಗಳವರೆಗೆ ಪೋಸ್ಟ್ ಆಫೀಸ್ ಸಮಯ ಠೇವಣಿಯ ಮೇಲೆ ಶೇ. 5.5 ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ನೀವು 5 ವರ್ಷದ ಸಮಯ ಠೇವಣಿಯ ಮೇಲೆ ಶೇ. 6.7 ಬಡ್ಡಿಯನ್ನು ಪಡೆಯುತ್ತೀರಿ. ಇದರಲ್ಲಿ, ನಿಮ್ಮ ಹಣವು ಸುಮಾರು 10.75 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
2. ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ (Post Office Saving Account) - ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ ಹಣ ದ್ವಿಗುಣಗೊಳ್ಳಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಇದರಲ್ಲಿ ನಿಮಗೆ ಕೇವಲ ವಾರ್ಷಿಕವಾಗಿ ಶೇ.4ರಷ್ಟು ಬಡ್ಡಿ ಸಿಗುತ್ತದೆ. ಅಂದರೆ, ಇಲ್ಲಿ ನಿಮ್ಮ ಹೂಡಿಕೆ ಡಬಲ್ ಆಗಲು 18 ವರ್ಷಗಳು ಬೇಕು.
3. ಪೋಸ್ಟ್ ಆಫೀಸ್ RD ಅಕೌಂಟ್ (Post Office RD Account) - ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ ಯೋಜನೆಯಲ್ಲಿ ನಿಮಗೆ ವಾರ್ಷಿಕ ಶೇ.5.8ರಷ್ಟು ಬಡ್ಡಿ ಸಿಗುತ್ತದೆ. ಅಂದರೆ, ಸುಮಾರು 12.41 ವರ್ಷಗಳಲ್ಲಿ ಇಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ ಎಂದರ್ಥ.
4. ಪೋಸ್ಟ್ ಆಫೀಸ್ ಮಂಥಲಿ ಇನ್ಕಂ ಸ್ಕೀಮ್ (Post Office Monthly Income Scheme)- ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ಪ್ರಸ್ತುತ ಶೇ.6.6ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಇಲ್ಲಿ ನಿಮ್ಮ ಹೂಡಿಕೆ ಡಬಲ್ ಆಗಲು ನಿಮಗೆ 10.91 ವರ್ಷಗಳು ಬೇಕಾಗುತ್ತವೆ.
5. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (Post Office Senior Citizen Scheme) - ಪೋಸ್ಟ್ ಆಫೀಸ್ ಸಿನಿಯರ್ ಸಿಟಿಜನ್ ಸ್ಕೀಮ್ ನಲ್ಲಿ ನಿಮಗೆ ವಾರ್ಷಿಕ ಶೇ.7.4ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಯ ಅಡಿ ನಿಮ್ಮ ಹೂಡಿಕೆ ಡಬಲ್ ಆಗಲು 9.73 ವರ್ಷಗಳು ಬೇಕು.
6. ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Post Office Public Provident Scheme) - PPF ನಲ್ಲಿನ 15 ವರ್ಷಗಳ ಹೂಡಿಕೆಯ ಮೇಲೆ ನಿಮಗೆ ಶೇ.7.1 ರಷ್ಟು ವಾರ್ಷಿಕ ಬಡ್ಡಿ ಸಿಗುತ್ತಿದೆ. ಇಲ್ಲಿ ನಿಮ್ಮ ಹಣ ಡಬಲ್ ಆಗಲು ಸುಮಾರು 10.14 ವರ್ಷಗಳು ಬೇಕು.
7. ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಯೋಜನಾ (Post Office Sukanya Samruddhi Yojana)- ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಅತಿ ಹೆಚ್ಚು ಬಡ್ಡಿ ಸಿಗುತ್ತದೆ. ಇಲ್ಲಿನ ನಿಮ್ಮ ಹೂಡಿಕೆಗೆ ವಾರ್ಷಿಕ ಶೇ.7.6ರಷ್ಟು ಬಡ್ಡಿ ಸಿಗುತ್ತದೆ. ಹೆಣ್ಣುಮಕ್ಕಳಿಗಾಗಿಯೇ ಇರುವ ಈ ಸ್ಕೀಮ್ ನಲ್ಲಿ ನಿಮ್ಮ ಹಣ ಡಬಲ್ ಆಗಲು 9.47 ವರ್ಷಗಳು ಬೇಕಾಗುತ್ತವೆ.
8. ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ (Post Office National Saving Certificate) - ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ ಮೇಲೆ ಶೇ.6.8ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. 5 ವರ್ಷಗಳ ಈ ಉಳಿತಾಯ ಯೋಜನೆಯಲ್ಲಿನ ಹೂಡಿಕೆ ಡಬಲ್ ಆಗಲು 10.59 ವರ್ಷಗಳು ಬೇಕಾಗುತ್ತವೆ.