Post Office Small Saving Scheme: ಮಾಸಿಕ ಕೇವಲ 500 ರೂ. ಹೂಡಿಕೆ ಮಾಡಿ, ಬಡ್ಡಿ & ತೆರಿಗೆ ಪ್ರಯೋಜನ ಪಡೆಯಿರಿ
ಈ ನಿರ್ದಿಷ್ಟ ಯೋಜನೆಯಲ್ಲಿ ಯಾವುದೇ ವ್ಯಕ್ತಿಯು ವಾರ್ಷಿಕವಾಗಿ ಕನಿಷ್ಠ 500 ರೂ. ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಇದೇ ಸಮಯದಲ್ಲಿ ನೀವು ಈ ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್‌ನಲ್ಲಿ ಗರಿಷ್ಠ 1.50 ಲಕ್ಷ ರೂ. ಠೇವಣಿ ಇಡಬಹುದು. ಈ ಯೋಜನೆಯಲ್ಲಿ ಠೇವಣಿದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 C ಅಡಿಯಲ್ಲಿ ಕಡಿತಕ್ಕೆ ಅರ್ಹರಾಗಿರುತ್ತಾರೆ. ವಯಸ್ಕರಾಗಿರುವ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು ಮತ್ತು ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯದ ಲಾಭವನ್ನು ಪಡೆಯಬಹುದು. ಇದಲ್ಲದೇ ಅಪ್ರಾಪ್ತ ವ್ಯಕ್ತಿಯ ಖಾತೆಯನ್ನು ಆತನ ಪೋಷಕರಿಂದಲೂ ತೆರೆಯಬಹುದು.
ಪ್ರಸ್ತುತ ಈ ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಲ್ಲಿ ಠೇವಣಿದಾರರು ವಾರ್ಷಿಕವಾಗಿ ಶೇ.7.1ರಷ್ಟು ಬಡ್ಡಿದರದ ಲಾಭವನ್ನು ಪಡೆಯುತ್ತಾರೆ. ಈ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಠೇವಣಿದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ ಪಿಪಿಎಫ್ ಯೋಜನೆಯಡಿ ಗಳಿಸಿದ ಬಡ್ಡಿಯು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿದೆ.
ಈ ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದರ ನಂತರ ಠೇವಣಿದಾರರ ಖಾತೆ ಪಕ್ವವಾಗುತ್ತದೆ. ಆದಾಗ್ಯೂ, ಖಾತೆ ತೆರೆದ ವರ್ಷವನ್ನು ಲೆಕ್ಕಹಾಕಲಾಗುವುದಿಲ್ಲ.