ತಲೆಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ ಈ ತರಕಾರಿ ರಸ!
ತರಕಾರಿಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.. ಅವುಗಳು ದೇಹದ ಆಂತರಿಕ ಆರೋಗ್ಯಕ್ಕೆ ಮಾತ್ರಲ್ಲವದೇ ಹೊರಗಿನ ಸೌಂದರ್ಯಕ್ಕೂ ಉಪಯುಕ್ತವಾಗಿವೆ..
ತರಕಾರಿಗಳಲ್ಲಿ ಆಲೂಗಡ್ಡೆ ಅತ್ಯಂತ ಬಹುಮುಖ ತರಕಾರಿಗಳಲ್ಲಿ ಒಂದಾಗಿದೆ... ಯಾವುದೇ ರೀತಿಯ ಅಡುಗೆಗೆ ಸೂಕ್ತವಾಗಿರುವ ಇದು ಮನುಷ್ಯನ ಕೂದಲಿನ ಆರೋಗ್ಯಕ್ಕೂ ಉಪಯುಕ್ತವಾಗಿದೆ..
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಲೂಗೆಡ್ಡೆ.. ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವುದಲ್ಲದೇ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ಆಲೂಗಡ್ಡೆ ರಸವು ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಸುಲಭವಾದ ಪರಿಹಾರವಾಗಿದೆ. ಆಲೂಗೆಡ್ಡೆ ರಸವನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಹಾಗೂ ಕೂದಲಿನ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದೆ.
ಸುಂದರವಾದ, ಆರೋಗ್ಯಕರ ಮತ್ತು ಉದ್ದನೆಯ ಕೂದಲನ್ನು ಪಡೆಯಲು ಸಾಕಷ್ಟು ಹಣವನ್ನು ಖರ್ಚು ಮಾಡುವುದು ಅನಿವಾರ್ಯತೆಯಿಲ್ಲ.. ನಿಮ್ಮ ಮನೆಯ ಅಡುಗೆಮನೆಯಲ್ಲಿ ಇರುವ ಆಲೂಗಡ್ಡೆ ಸಾಕು.
ಅರ್ಧ ಕಪ್ ಆಲೂಗಡ್ಡೆ ರಸವನ್ನು ತೆಗೆದುಕೊಂಡು 1 ರಿಂದ 2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗೆ ಮುಕ್ತಿ ನೀಡಬಹುದು..
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.