ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳಿಂದಲೂ ನಿಮ್ಮನ್ನು ರಕ್ಷಿಸುತ್ತೆ ಆಲೂಗಡ್ಡೆ ಸಿಪ್ಪೆ
![ಆಲೂಗಡ್ಡೆ ಸಿಪ್ಪೆ ಪ್ರಯೋಜನ ಆಲೂಗಡ್ಡೆ ಸಿಪ್ಪೆ ಪ್ರಯೋಜನ](https://kannada.cdn.zeenews.com/kannada/sites/default/files/2024/05/28/409932-potatopeelbenefits.jpg?im=FitAndFill=(500,286))
ತರಕಾರಿಗಳ ರಾಜ ಆಲೂಗಡ್ಡೆ ರುಚಿಕರ ಮಾತ್ರವಲ್ಲ ಅದು ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆಲೂಗಡ್ಡೆ ಮಾತ್ರವಲ್ಲ ಅದರ ಸಿಪ್ಪೆಯಿಂದಲೂ ಆರೋಗ್ಯಕ್ಕೆ ಹಲವು ಲಾಭಗಳಿವೆ. ಆಲೂಗಡ್ಡೆ ಸಿಪ್ಪೆಯು ನಮ್ಮನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅದರ ಪ್ರಯೋಜನಗಳೆಂದರೆ...
![ಆಲೂಗಡ್ಡೆ ಸಿಪ್ಪೆಯ ಪ್ರಯೋಜನಗಳು ಆಲೂಗಡ್ಡೆ ಸಿಪ್ಪೆಯ ಪ್ರಯೋಜನಗಳು](https://kannada.cdn.zeenews.com/kannada/sites/default/files/2024/05/28/409931-potatopeelbenefits-1.jpg?im=FitAndFill=(500,286))
ಆಲೂಗಡ್ಡೆ ಸಿಪ್ಪೆಯಲ್ಲಿರುವ ಅಂಶಗಳು ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
![ಚರ್ಮಕ್ಕೆ ಪ್ರಯೋಜನಕಾರಿ ಚರ್ಮಕ್ಕೆ ಪ್ರಯೋಜನಕಾರಿ](https://kannada.cdn.zeenews.com/kannada/sites/default/files/2024/05/28/409930-potatopeelbenefits-2.jpg?im=FitAndFill=(500,286))
ಆಲೂಗಡ್ಡೆ ಸಿಪ್ಪೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಫೀನಾಲಿಕ್ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಚರ್ಮದ ಮೇಲಿನ ಕಲೆಯನ್ನು ನಿವಾರಿಸಿ ಕಾಂತಿಯುತ ಚರ್ಮವನ್ನು ಪಡೆಯಲು ಸಹಕಾರಿ ಆಗಿದೆ.
ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದಲ್ಲದೆ, ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳೂ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕೂಡ ಕಂಡು ಬರುತ್ತದೆ. ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಆಲೂಗೆಡ್ಡೆ ಸಿಪ್ಪೆಗಳಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ಕ್ಯಾಲ್ಸಿಯಂ, ತಾಮ್ರ ಮತ್ತು ಸತು ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಆಲೂಗಡ್ಡೆ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇದ್ದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಆಲೂಗಡ್ಡೆ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಕೂದಲ ಬೆಳವಣಿಗೆಗೆ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.