ಬಿಳಿಕೂದಲಿಗೆ ಶಾಶ್ವತ ಕಪ್ಪು ಬಣ್ಣ ನೀಡುತ್ತೆ ಆಲೂಗಡ್ಡೆ ಸಿಪ್ಪೆ! ಹೀಗೆ ಬಳಸಿದ್ರೆ 5 ನಿಮಿಷದಲ್ಲಿ ರಿಸಲ್ಟ್ ಪಕ್ಕಾ
ಬಿಳಿಕೂದಲಿನ ಸಮಸ್ಯೆಯನ್ನು ದೂರಮಾಡಲೆಂದು ರಾಸಾಯನಿಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಅದು ಕೂದಲಿಗೆ ಮಾತ್ರವಲ್ಲ, ನೆತ್ತಿಯ ಅಲರ್ಜಿಗೂ ಕಾರಣವಾಗುತ್ತದೆ.
ಈ ಸಮಸ್ಯೆಗೆ ಮನೆಯಲ್ಲೇ ಒಂದು ಅತ್ಯುತ್ತಮ ಮನೆಮದ್ದನ್ನು ತಯಾರಿಸಬಹುದು. ಅದು ಕೂಡ ವೇಸ್ಟ್ ಎಂದು ಬಿಸಾಡುವ ಆಲೂಗಡ್ಡೆ ಸಿಪ್ಪೆಯಿಂದ. ನಿಮಗೆ ಆಶ್ಚರ್ಯವಾದ್ರೂ ಇದು ನಿಜ. ಏಕೆಂದರೆ ಆಲೂಗಡ್ಡೆಯಲ್ಲಿರುವ ಪಿಷ್ಟವು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಬಿಳಿಕೂದಲಿಗೆ ಆಲೂಗೆಡ್ಡೆ ಸಿಪ್ಪೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಮೊದಲ ವಿಧಾನವೆಂದರೆ 5-6 ದೊಡ್ಡ ಆಲೂಗೆಡ್ಡೆ ಸಿಪ್ಪೆಗಳನ್ನು ಸರಳವಾಗಿ ಕುದಿಸಿ. ಅದರ ನೀರು ದಪ್ಪವಾಗುವವರೆಗೆ ಚೆನ್ನಾಗಿ ಕುದಿಸಬೇಕು. ಬಳಿಕ ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆವರೆಗೆ ಹಾಗೆ ಬಿಡಿ, ಆ ನಂತರ ಶಾಂಪೂ ಮಾಡಿ.
ಇನ್ನೊಂದು ವಿಧಾನವೆಂದರೆ 8-10 ಆಲೂಗೆಡ್ಡೆ ಸಿಪ್ಪೆಗಳನ್ನು ಒಂದು ಲೋಹದ ಬೋಗುಣಿಗೆ ಹಾಕಿ ನೀರಿನಿಂದ ಬೇಯಿಸುವುದು. ಇದಕ್ಕೆ ಕಾಫಿ, ಅಲೋವೆರಾ ಮತ್ತು ರೋಸ್ ವಾಟರ್ ಸೇರಿಸಿ. ಈ ಲೇಹವನ್ನು ಕೂದಲಿಗೆ ಚೆನ್ನಾಗಿ ಹಚ್ಚಬೇಕು.
ಆಲೂಗಡ್ಡೆ ಸಿಪ್ಪೆಯು ಬಿಳಿ ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಮೊದಲನೆಯದಾಗಿ, ಆಲೂಗಡ್ಡೆ ಟೈರೋಸಿನೇಸ್ ಎಂಬ ಪಾಲಿಫಿನಾಲ್ ಆಕ್ಸಿಡೇಸ್ ಕಿಣ್ವವನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಆಲೂಗಡ್ಡೆ ಸಿಪ್ಪೆಯಿಂದ ಹೊರಬರುವ ನೀರಿನಲ್ಲಿ ಕಬ್ಬಿಣ, ಸತು, ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ನಿಯಾಸಿನ್ ಮತ್ತು ಮೆಗ್ನೀಸಿಯಮ್ ಇರುತ್ತದೆ. ಇದು ಬಿಳಿಕೂದಲಿಗೆ ಮಾತ್ರವಲ್ಲ, ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುವ ಗುಣವನ್ನು ಹೊಂದಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)