ಹೇರ್ ಡೈ, ಕಲರ್ ಯಾವುದೂ ಬೇಡ, ಆಲೂಗಡ್ಡೆ ಸಿಪ್ಪೆಯನ್ನು ಹೀಗೆ ಬಳಸಿ !ಅರ್ಧ ಗಂಟೆಯಲ್ಲಿ ಬಿಳಿ ಕೂದಲಾಗುವುದು ಕಪ್ಪು
ಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡುತ್ತದೆ ಆಲೂಗಡ್ಡೆ. ಕೇಳುವುದಕ್ಕೆ ಆಶ್ಚರ್ಯ ಎನಿಸಿದರೂ ಇದು ಸತ್ಯ.
ಆಲೂಗೆಡ್ಡೆ ಸಿಪ್ಪೆಗಳಿಂದ ಹೊರಬರುವ ನೀರಿನಲ್ಲಿರುವ ಮೆಗ್ನೀಸಿಯಮ್, ಪೊಟ್ಯಾಸಿಯಮ್,ನಿಯಾಸಿನ್,ಕ್ಯಾಲ್ಸಿಯಂ,ತಾಮ್ರ, ಸತು ಮತ್ತು ಕಬ್ಬಿಣ ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಆರೋಗ್ಯ ತಜ್ಞರ ಪ್ರಕಾರ,ಆಲೂಗೆಡ್ಡೆ ಸಿಪ್ಪೆಗಳಲ್ಲಿ ಪಾಲಿಫಿನಾಲ್ ಆಕ್ಸಿಡೇಸ್ ಎಂಜೈಮ್ ಕಂಡುಬರುತ್ತದೆ.ಈ ಕಿಣ್ವವನ್ನು ಟೈರೋಸಿನೇಸ್ ಎಂದೂ ಕರೆಯುತ್ತಾರೆ.ಇದು ಬಿಳಿ ಕೂದಲನ್ನು ಹೋಗಲಾಡಿಸಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಮೊದಲು 5-6 ದೊಡ್ಡ ಆಲೂಗಡ್ಡೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ.ನೀರು ದಪ್ಪವಾಗುವವರೆಗೆ ಅವುಗಳನ್ನು ಬೇಯಿಸಿ.ಸ್ನಾನ ಮಾಡುವುದಕ್ಕೆ ಮುನ್ನ ಅದೇ ದಪ್ಪ ನೀರನ್ನು ಕೂದಲಿಗೆ ಹಚ್ಚಿ.ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ, ಮತ್ತೆ ಬಿಳಿ ಕೂದಲು ಬೆಳೆಯುವುದೂ ಇಲ್ಲ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.