ಈ ತರಕಾರಿ ಬೇಯಿಸಿದ ನೀರನ್ನು ಕೂದಲಿಗೆ ಹಚ್ಚಿ: 5 ದಿನದಲ್ಲಿ ಬಿಳಿಕೂದಲು ಬುಡದಿಂದಲೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ!
ಬಿಳಿ ಕೂದಲನ್ನು ಕಪ್ಪಾಗಿಸಲು ಬಯಸುವವರಲ್ಲಿ ನೀವೂ ಇದ್ದರೆ, ಇಲ್ಲಿ ಉಲ್ಲೇಖಿಸಿರುವ ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬಹುದು. ಕೂದಲನ್ನು ಕಪ್ಪಾಗಿಸಲು ಆಲೂಗಡ್ಡೆ ಸಿಪ್ಪೆ ಬೆಸ್ಟ್. ಆದರೆ ಅದನ್ನು ಸರಿಯಾದ ವಿಧಾನಗಳಲ್ಲಿ ಬಳಕೆ ಮಾಡಬೇಕು,
ಆಲೂಗಡ್ಡೆ ಕತ್ತರಿಸಿದ ತಕ್ಷಣ, ಸ್ವಲ್ಪ ಸಮಯದ ನಂತರ ಅವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಈ ಪ್ರಕ್ರಿಯೆಯನ್ನು ನೀವು ಗಮನಿಸಿರಬೇಕು. ಆಲೂಗಡ್ಡೆಯಲ್ಲಿರುವ ಪಾಲಿಫಿನಾಲ್ ಆಕ್ಸಿಡೇಸ್ ಎಂಬ ಕಿಣ್ವದಿಂದಾಗಿ ಇದು ಸಂಭವಿಸುತ್ತದೆ. ಇದನ್ನು ಟೈರೋಸಿನೇಸ್ ಎಂದೂ ಕರೆಯುತ್ತಾರೆ. ಇದಲ್ಲದೆ, ಕಬ್ಬಿಣ, ಸತು, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ನಿಯಾಸಿನ್ ಅವುಗಳಲ್ಲಿ ಕಂಡುಬರುತ್ತವೆ.
ಕೂದಲನ್ನು ಕಪ್ಪಾಗಿಸಲು ನೀವು ಆಲೂಗೆಡ್ಡೆ ಸಿಪ್ಪೆಯನ್ನು ಬಹಳ ಸುಲಭವಾಗಿ ಬಳಕೆ ಮಾಡಬಹುದು. ಇದರ ನಿಯಮಿತ ಬಳಕೆಯು ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಮೊದಲನೆಯದಾಗಿ, ಒಲೆ ಮೇಲೆ ಒಂದು ಪ್ಯಾನ್ ಇಟ್ಟು, 2 ರಿಂದ 3 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಈಗ ನೀವು 2 ಆಲೂಗಡ್ಡೆ ಸಿಪ್ಪೆಗಳನ್ನು ತೆಗೆದುಕೊಳ್ಳಿ. ಈ ನೀರಿಗೆ ಸಿಪ್ಪೆಗಳನ್ನು ಹಾಕಿ ಸುಮಾರು ಅರ್ಧ ಗಂಟೆ ಬೇಯಿಸಿ ಗ್ಯಾಸ್ ಆಫ್ ಮಾಡಿ. 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ, ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಈ ನೀರನ್ನು ಹಾಕಿ, ಫಿಲ್ಟರ್ ಮಾಡಿ. ಪ್ರತ್ಯೇಕ ಪಾತ್ರೆಯಲ್ಲಿ ತೆಗೆದುಕೊಳ್ಳಿ.
ಈ ನೀರಿಗೆ ಅರ್ಧ ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಸಂಪೂರ್ಣವಾಗಿ ತಣ್ಣಗಾದ ನಂತರ, ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಇರಿಸಿ. ಆಲೂಗಡ್ಡೆ ಸಿಪ್ಪೆಯ ನೀರನ್ನು ಕೂದಲಿಗೆ ಹಚ್ಚುವ ಮೊದಲು ಕೂದಲನ್ನು ತೊಳೆದು ಸ್ವಚ್ಛಗೊಳಿಸಬೇಕು. ನೆನಪಿಡಿ, ಈ ಸಂದರ್ಭದಲ್ಲಿ ಶಾಂಪೂ ಮತ್ತು ಕಂಡಿಷನರ್ ಅನ್ನು ಬಳಸಬೇಡಿ. ಕೂದಲು ನೈಸರ್ಗಿಕವಾಗಿ ಒಣಗಲು ಬಿಡಿ.
ನಂತರ ಕೂದಲನ್ನು ಬಾಚಿ, ಸಣ್ಣ ಭಾಗಗಳಾಗಿ ವಿಂಗಡಿಸಿ. ಆಲೂಗಡ್ಡೆ ಸಿಪ್ಪೆಯ ನೀರನ್ನು ಈಗ ಬಿಳಿ ಕೂದಲಿನ ಮೇಲೆ ಸಿಂಪಡಿಸಿ. ಸ್ವಲ್ಪ ಸಮಯದ ನಂತರ, ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ 5 ದಿನಗಳಲ್ಲಿ ನಿಮಗೆ ರಿಸಲ್ಟ್ ಗೋಚರಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)