Power Bankನ ಅಗತ್ಯವೇ ಇಲ್ಲ..! 10090mAh ಬ್ಯಾಟರಿಯೊಂದಿಗೆ ಹೊಸ tab ಲಾಂಚ್ ಮಾಡಿದ Samsung
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 FE ವೈಫೈ 12.4-ಇಂಚಿನ WQVGA ಡಿಸ್‌ಪ್ಲೇ ಹೊಂದಿದೆ. ಇದು 2560x1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು ಆಂಡ್ರಾಯ್ಡ್ ಆವೃತ್ತಿ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಒನ್ ಯುಐ ಆಧರಿಸಿದೆ.
ಈ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750 ಜಿ ಪ್ರೊಸೆಸರ್ ಅನ್ನು ಹೊಂದಿದ್ದು, ಇದು 4 ಜಿಬಿ RAM ಅನ್ನು ಹೊಂದಿದೆ. ಇದು 64 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿ ವರೆಗೆ ವಿಸ್ತರಿಸಬಹುದು.
ಟ್ಯಾಬ್ಲೆಟ್‌ನ ಕ್ಯಾಮರಾದಲ್ಲಿ ಕಂಪನಿಗಳು ಹೆಚ್ಚು ಕೆಲಸ ಮಾಡುವುದಿಲ್ಲ ಎಂಬುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಫೋಟೋಗಳು ಕೂಡ ಉತ್ತಮವಾಗಿ ಮೂಡಿ ಬರುವುದಿಲ್ಲ. ಆದರೆ ಸ್ಯಾಮ್‌ಸಂಗ್ ತನ್ನ ಟ್ಯಾಬ್ಲೆಟ್‌ನಲ್ಲಿ ಕ್ಯಾಮೆರಾ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಕಂಪನಿಯು ತನ್ನ ಹೊಸ ಟ್ಯಾಬ್ಲೆಟ್ ನಲ್ಲಿ 8 MP ಹಿಂಬದಿಯ ಕ್ಯಾಮೆರಾವನ್ನು ನೀಡಿದ್ದು, ಸೆಲ್ಫಿಗಾಗಿ 5 MP ಕ್ಯಾಮೆರಾವನ್ನು ನೀಡಲಾಗಿದೆ.
ನೀವು ಈ ಸ್ಯಾಮ್ಸಂಗ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಖರೀದಿಸಿದರೆ, ನಿಮಗೆ ಪವರ್ ಬ್ಯಾಂಕ್ ನ ಅಗತ್ಯವಿರುವುದಿಲ್ಲ. ಈ ಟ್ಯಾಬ್ಲೆಟ್ 10,090 mAh ಬ್ಯಾಟರಿಯನ್ನು ಹೊಂದಿದೆ. ಇದು ಉತ್ತಮ ಬ್ಯಾಕಪ್ ನೀಡುತ್ತದೆ. ಮಾತ್ರವಲ್ಲ, ಈ ಸ್ಯಾಮ್‌ಸಂಗ್ ಟ್ಯಾಬ್ಲೆಟ್ 45W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಅನ್ನು ಇತರ ಟ್ಯಾಬ್ಲೆಟ್‌ಗಳಿಗಿಂತ ಬೇಗನೆ ಚಾರ್ಜ್ ಕೂಡಾ ಮಾಡಬಹುದಾಗಿದೆ.
ಒಟ್ಟಾರೆಯಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ S7 FE ನ ವೈಫೈ ಆವೃತ್ತಿಯ ವೈಶಿಷ್ಟ್ಯಗಳು LTE ವೆರಿಯೇಂಟ್ ನ ವೈಶಿಷ್ಟ್ಯಗಳನ್ನು ಹೋಲುತ್ತವೆ. ಇದನ್ನು S Pen ನೊಂದಿಗೆ ಪರಿಚಯಿಸಲಾಗಿದೆ. ಈ ಟ್ಯಾಬ್ಲೆಟ್ ಅನ್ನು ಡಾಲ್ಬಿ ಅಟ್ಮೋಸ್ ಸಪ್ಪೋರ್ಟ್ ನೊಂದಿಗೆ ಪರಿಚಯಿಸಲಾಗಿದೆ, ಇದರ ಬೆಲೆ 41,999 ರೂ.
ಇದನ್ನು 4 GB RAM ಮತ್ತು 64 GB ಸ್ಟೋರೇಜ್ ರೂಪಾಂತರಗಳೊಂದಿಗೆ ಪರಿಚಯಿಸಲಾಗಿದೆ. ಇದನ್ನು ಮಿಸ್ಟಿಕ್ ಪಿಂಕ್, ಮಿಸ್ಟಿಕ್ ಬ್ಲಾಕ್, ಮಿಸ್ಟಿಕ್ ಸಿಲ್ವರ್ ಮತ್ತು ಮಿಸ್ಟಿಕ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಇದನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಿಂದ ಖರೀದಿಸಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ ರೂ. 4,000 ವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ನೀಡಲಾಗುತ್ತದೆ. ಅಲ್ಲದೆ, ಕೀಬೋರ್ಡ್‌ನಲ್ಲಿ 10,000 ರೂ.ಗಳ ರಿಯಾಯಿತಿ ಕೂಡ ಲಭ್ಯವಿರುತ್ತದೆ.