ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು.. ಆದರೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವರ್‌ ಸ್ಟಾರ್‌! ಆ ಒಂದೇ ಕಾರಣಕ್ಕೆ ಬದುಕೇ ಬೇಡವೆಂದು ಅನಿಸಿತ್ತಂತೆ!!

Mon, 04 Nov 2024-6:34 pm,

Pawan Kalyan: ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ತಮ್ಮ ಮೂರು ಮದುವೆಗಳು ಮತ್ತು ಖಿನ್ನತೆಯ ವಿಚಾರವಾಗಿ ಮಾತನಾಡುತ್ತಾ ಅವರು ಭಾವುಕರಾಗಿದ್ದರು.

ಪವನ್ ಕಲ್ಯಾಣ್ ಬಾಲ್ಯದಿಂದಲೂ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿದ್ದರಂತೆ. ಟಾಲಿವುಡ್ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್ ‌ ಚಾಟ್‌ ಶೋನಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

"ನಾನು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಅಣ್ಣ ಚಿರಂಜೀವಿ ಅವರ ಕೊಠಡಿಯಿಂದ ಪರವಾನಗಿ ಪಡೆದ ರಿವಾಲ್ವರ್ ಎತ್ತಿಕೊಂಡು ಬಂದಿದ್ದೆ" ಎಂದು ಈ ಚಾಟ್‌ ಶೋನಲ್ಲಿ ತಿಳಿಸಿದ್ದಾರೆ. 

"ನಾನು ಮೂವರನ್ನೂ ಒಂದೇ ಬಾರಿಗೆ ಮದುವೆಯಾಗಲಿಲ್ಲ, ಕೆಲವು ಕಾರಣಗಳಿಂದ ಮದುವೆ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ. ನಾವು ಬೇರ್ಪಟ್ಟಿದ್ದೇವೆ" ಎಂದಿದ್ದಾರೆ.

"ನಾನು ಒಮ್ಮೆಯೂ ಮದುವೆಯಾಗಲು ಉದ್ದೇಶಿಸಿರಲಿಲ್ಲ. ಆದರೆ ಇಷ್ಟೆಲ್ಲ ನಡೆದು ಹೋಯಿತು. ವಿರೋಧ ಪಕ್ಷಗಳು ಆಗಾಗ್ಗೆ ಈ ವಿಚಾರವನ್ನು ಕೆದಕಿ ಮಾತನಾಡುತ್ತವೆ. ನನ್ನ ನೈತಿಕತೆ ಮತ್ತು ಮೌಲ್ಯಗಳು ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡಲು ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ನಿರೂಪಕ ನಂದಮೂರಿ ಬಾಲಕೃಷ್ಣ ಅವರು ಪವನ್ ಕಲ್ಯಾಣ್ ಈಗಲೂ ಅವರ ಮಾಜಿ ಪತ್ನಿಯರೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಿದಾಗ, ನಟ ಪಾಸಿಟಿವ್‌ ಆಗಿಯೇ ಉತ್ತರಿಸಿದರು. ನಾನು ಅವರೊಂದಿಗೆ ಮಾತನಾಡುತ್ತೇನೆ. ಅವರ ಜೀವನದ ಆಗು ಹೋಗುಗಳ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. 

ಪವನ್ ಕಲ್ಯಾಣ್ ಮೊದಲಿಗೆ 19 ವರ್ಷದ ನಂದಿನಿ ಎಂಬ ಯುವತಿಯೊಂದಿಗೆ ಅರೇಂಜ್ಡ್ ಮ್ಯಾರೇಜ್ ಆಗಿದ್ದರು. ನಂತರ ನಟಿ ರೇಣು ದೇಸಾಯಿ ಜೊತೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದರು. 2008 ರಲ್ಲಿ ನಂದಿನಿಯಿಂದ ವಿಚ್ಛೇದನ ಪಡೆದು, 2009 ರಲ್ಲಿ ರೇಣು ದೇಸಾಯಿ ಅವರನ್ನು ವಿವಾಹವಾದರು. 

ದಂಪತಿಗೆ ಅಕಿರಾ ನಂದನ್ ಮತ್ತು ಆಧ್ಯ ಎಂಬ ಇಬ್ಬರು ಮಕ್ಕಳಿದ್ದರು. ನಂತರ 2012 ರಲ್ಲಿ ವಿಚ್ಛೇದನ ಪಡೆದರು. ಬಳಿಕ ಡಿಸೆಂಬರ್ 2013 ರಲ್ಲಿ ರಷ್ಯಾದ ಹುಡುಗಿ ಅನ್ನಾ ಅವರನ್ನು ವಿವಾಹವಾದರು. ಈ ದಂಪತಿಗೂ ಇಬ್ಬರು ಮಕ್ಕಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link