Fans Celebrating James Poster Release: ಎಲ್ಲೆಲ್ಲೂ ʼಅಪ್ಪುʼ ನೆನಪು..! ಅಭಿಮಾನಿಗಳ ಪ್ರೀತಿ ʼಆಕಾಶʼದಷ್ಟು..!
1. ಭರ್ಜರಿ ಸಂಭ್ರಮಾಚರಣೆ - ಜೇಮ್ಸ್ ಪೋಸ್ಟರ್ ಬಿಡುಗಡೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಹೊರಗೆ ಭರ್ಜರಿ ಸಂಭ್ರಮಾಚರಣೆ ನಡೆದಿದೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಅಪ್ಪು ಅವರನ್ನ ನೆನೆದು ಭಾವುಕರಾದರು. ಹಾಗೇ ತಮ್ಮ ನೆಚ್ಚಿನ ನಟನಿಗೆ ನಮಿಸಿದ್ದಾರೆ.
2. ಸಂಗೀತದ ಮೂಲಕ ಗೌರವ - ಅಪ್ಪು ನಮ್ಮನ್ನೆಲ್ಲಾ ಅಗಲಿ 3 ತಿಂಗಳು ಕಳೆಯುತ್ತಿದೆ. ಆದರೆ ಅಪ್ಪು ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ವಿಶೇಷವಾಗಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಂಠೀರವ ಸ್ಟೂಡಿಯೋ ಬಳಿ ಕೆಲ ಅಭಿಮಾನಿಗಳು ಕೊಳಲಿನ ಸಂಗೀತದಲ್ಲಿ ಅಪ್ಪು ಹಾಡುಗಳನ್ನು ನುಡಿಸುವ ಮೂಲಕ ತಮ್ಮ ನೆಚ್ಚಿನ ನಟನನ್ನ ಸ್ಮರಿಸುತ್ತಿದ್ದಾರೆ.
3. ಎಲ್ಲೆಲ್ಲೂ ʼಅಪ್ಪುʼ..! -ಹಾಗೇ ಕಂಠೀರವ ಸ್ಟುಡಿಯೋ ಬಳಿ ಅಪ್ಪು ಅವರ ಫೋಟೋಗಳು ಮತ್ತು ಟೀ ಶರ್ಟ್‌ಗಳನ್ನ ಮಾರಾಟ ಮಾಡಲಾಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ ಮತ್ತು ಟೀ ಶರ್ಟ್ ಖರೀದಿಸುತ್ತಿದ್ದಾರೆ. ಅದರಲ್ಲೂ ತಮ್ಮ ತಮ್ಮ ಮಕ್ಕಳಿಗೆ ಅಪ್ಪು ಭಾವಚಿತ್ರವಿರುವ ಟೀ ಶರ್ಟ್ ಗಳನ್ನ ಪೋಷಕರು ಖರೀದಿ ಮಾಡುತ್ತಿದ್ದಾರೆ.
4. 'ಅಪ್ಪು ಅಜರಾಮರ - ಒಟ್ನಲ್ಲಿ ಹೇಳುವುದಾದರೆ, ಅಪ್ಪು ನೆನಪು ಅಜರಾಮರ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾಗಾಗಿ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದು. ಅಪ್ಪು ಹುಟ್ಟುಹಬ್ಬಕ್ಕೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ.