Puneeth Rajkumar: ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ʻನಟಸಾರ್ವಭೌಮʼ ಅಪ್ಪು ಮುಡಿಗೇರಿದ ಪ್ರಶಸ್ತಿಗಳಿವು!

Sun, 17 Mar 2024-9:30 am,

ಅರಸು: ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅರಸು ಸಿನಿಮಾದಲ್ಲಿನ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದರು.. ಈ ಚಿತ್ರದಲ್ಲಿ ರಮ್ಯಾ, ಶ್ರೀನಿವಾಸ ಮೂರ್ತಿ ಮತ್ತು ಶ್ರೀಯಾ ಸರನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..   

ಜಾಕಿ: ಅಭಿಮಾನಿಗಳ ಅಚ್ಚುಮೆಚ್ಚಿನ ಜಾಕಿ ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ನಾಮನಿರ್ದೇಶನದ ಜೊತೆಗೆ ಉದಯ ಫಿಲ್ಮ್ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು..  ದುನಿಯಾ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಭಾವನಾ, ಹರ್ಷಿಕಾ ಪೂಣಚ್ಚ ಮತ್ತು ಇತರರೊಂದಿಗೆ ಅಪ್ಪು ನಟಿಸಿದ್ದಾರೆ. ಉತ್ತಮ ಗಳಿಕೆಯೊಂದಿಗೆ ಪ್ರೇಕ್ಷಕರಿಗೆ ಇಷ್ಟವಾದ ಜಾಕಿ ಸಿನಿಮಾವನ್ನು ಅಪ್ಪು ಅವರ ಜನ್ಮದಿನದಂದು ಅವರಿಗೆ ಗೌರವಾರ್ಥವಾಗಿ ಶುಕ್ರವಾರ ಮರು ಬಿಡುಗಡೆ ಮಾಡಲಾಗಿದೆ.   

ಮಿಲನ: ಪ್ರಕಾಶ್ ನಿರ್ದೇಶನದ ಮಿಲನ ಸಿನಿಮಾದಲ್ಲಿ ಪುನೀತ್‌ ಪಾರ್ವತಿ ಹಾಗೂ ಪೂಜಾ ಗಾಂಧಿ ಅವರೊಂದಿಗೆ ನಟಿಸಿದ್ದರು.. ಈ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು.. ಈ ಸಿನಿಮಾಗಾಗಿ ಅಪ್ಪು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.  

ರಾಜಕುಮಾರ: ರಾಜಕುಮಾರ ಚಿತ್ರಕ್ಕಾಗಿ ಪುನೀತ್‌ ಅತ್ಯುತ್ತಮ ನಟ, ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆಯುವುದರೊಂದಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ TSR ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಅಪ್ಪು ನಾಮನಿರ್ದೇಶನಗೊಂಡರು.  

ಇಷ್ಟೆಲ್ಲ ಸಾಧನೆಗೈದ ನಟನಿಂದು ನಮ್ಮೊಂದಿಗಿಲ್ಲ ಎನ್ನುವುದೇ ನಮ್ಮೆಲ್ಲರ ದುರಾದೃಷ್ಟ.. ಅಪ್ಪು ಅವರನ್ನು ನೆನೆಯದ ಮನಸ್ಸುಗಳಿಲ್ಲ. ಅವರು ದೈಹಿಕವಾಗಿ ಇಲ್ಲವಾದರೂ ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತ ನೆನಪಾಗಿ ಉಳಿದುಕೊಂಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link