ಕಿಡ್ನಿ ಸ್ಟೋನ್‌ ಕರಗಿಸುವ ಶಕ್ತಿಶಾಲಿ ಕಾಳು... ನೀರಿಗೆ ಹಾಕಿ ಕುಡಿದರೆ ನೋವಿಲ್ಲದೇ ಕರಗಿ ಹೊರಬರುತ್ತೆ ಮೂತ್ರಪಿಂಡದ ಕಲ್ಲು! ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುವುದು

Tue, 07 Jan 2025-10:41 am,

Kidney Stones Remedies: ಉತ್ತಮ ಆಹಾರ ಸೇವನೆಯು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಪ್ರೋಟೀನ್‌, ವಿಟಮಿನ್‌, ಖನಿಜಗಳು ಇತ್ಯಾದಿಗಳನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದು ಅವಶ್ಯಕ. ಕೊಲೆಸ್ಟ್ರಾಲ್, ಪೈಲ್ಸ್, ಕಿಡ್ನಿ ಸ್ಟೋನ್ಸ್ ಸಮಸ್ಯೆಗಳಿದ್ದರೆ ಹುರುಳಿ ಕಾಳುಗಳನ್ನು ತಿನ್ನುವುದು ರಾಮಬಾಣ. 

ಹುರುಳಿ ಕಾಳುಗಳಲ್ಲಿ ಅತ್ಯಧಿಕ ಪ್ರಮಾಣದ ಪ್ರೋಟೀನ್ ಇದೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. 

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಹಾರದಲ್ಲಿ ಹುರುಳಿ ಕಾಳುಗಳನ್ನು ಸೇರಿಸಿಕೊಳ್ಳಬೇಕು. ಹುರುಳಿ ಕಾಳು ತಿನ್ನುವುದರಿಂದ ಚಯಾಪಚಯವು ಸುಧಾರಿಸುತ್ತದೆ. ತೂಕವನ್ನು ಕಡಿಮೆ ಮಾಡುತ್ತದೆ. 

ಹುರುಳಿ ಕಾಳು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಹುರುಳಿ ಕಾಳು  ದೇಹದಲ್ಲಿ ಯೂರಿಕ್ ಆಸಿಡ್‌ ಪ್ರಮಾಣವನ್ನು ನಿಯಂತ್ರಿಸಲು ಸಹ ಸಹಕಾರಿಯಾಗಿದೆ.

ಹುರುಳಿ ಕಾಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಅದರ ನೀರನ್ನು ಕುಡಿದರೆ ಕಿಡ್ನಿ ಸ್ಟೋನ್‌ ಕೆಲವೇ ದಿನಗಳಲ್ಲಿ ಕರಗಿ ಹೋಗುವುದು. 

ಹುರುಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹ ಕೆಲಸ ಮಾಡುತ್ತದೆ. ಪೈಲ್ಸ್‌ ಸಮಸ್ಯೆಗೂ ಇದು ರಾಮಬಾಣ ಆಗಿದೆ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link