ಕನ್ಯಾ ರಾಶಿಯಲ್ಲಿ ಪವರ್ಫುಲ್ ಶತ್ರುಹಂತಾ ಯೋಗ ನಿರ್ಮಾಣ , ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!
ಹಾಗೆ ನೋಡಿದರೆ ಶತ್ರುಹಂತಾ ಯೋಗ ಎರಡು ಶಬ್ದಗಳ ಸಮ್ಮಿಶ್ರಣವಾಗಿದೆ. ಇದರ ಅರ್ಥ ಶತ್ರು- ಶತ್ರುಗಳು ಹಂತಾ-ವಿನಾಶ ಎಂದಾಗುತ್ತದೆ. ಜಾತಕದ ಆರನೇ ಭಾವ ಶತ್ರುವಿನ ಭಾವವಾಗಿರುತ್ತದೆ. ಹೀಗಿರುವಾಗ ಈ ಭಾವದ ಮೇಲೆ ಮಂಗಳ ಅಥವಾ ಶನಿ ಸ್ಥಿತಿರಾಗಿದ್ದರೆ ಅಥವಾ ಅವರ ನೇರ ದೃಷ್ಟಿ ಬೀಳುತ್ತಿದ್ದರೆ, ಈ ಯೋಗ ನಿರ್ಮಾಣಗೊಳ್ಳುತ್ತದೆ. ಈ ಯೋಗವನ್ನು ಅತ್ಯಂತ ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಯೋಗ ನಿರ್ಮಾಣಗೊಳ್ಳುವುದರಿಂದ ಜಾತಕದವರಿಗೆ ಸಾಲಭಾಧೆ, ಕಾನೂನಾತ್ಮಕ ತೊಡಕುಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಇದಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಕೂಡ ಪ್ರಾಪ್ತಿಯಾಗುತ್ತದೆ.
ಮೇಷ ರಾಶಿ: ನಿಮ್ಮ ಗೋಚರ ಜಾತಕದಲ್ಲಿ ಮಂಗಳ ಎಂಟನೇ ಭಾವಕ್ಕೆ ಅಧಿಪತಿ. ಇದಲ್ಲದೆ ಆತ ಕನ್ಯಾ ರಾಶಿಯಲ್ಲಿ ಪ್ರವೇಶಿಸಿ ಆರನೇ ಮನೆ ಸ್ಥಿತನಾಗಿದ್ದಾನೆ. ಇದರಿಂದ ಶತ್ರು ಹಂತಾ ಯೋಗ ನಿರ್ಮಾಣ ಗೊಂಡಿದೆ. ಈ ಯೋಗ ನಿರ್ಮಾಣದಿಂದ ಕಾನೂನು ಹೋರಾಟಗಳಲ್ಲಿ ಜಯ ನಿಮ್ಮದಾಗಲಿದೆ. ವೃತ್ತಿಪರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಇರಲಿವೆ. ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ನಿಮ್ಮ ಪರಿಶ್ರಮದ ಸಹಾಯದಿಂದ ಎಲ್ಲರ ಪ್ರಶಂಸೆಯನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗುವಿರಿ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ.
ಕರ್ಕ ರಾಶಿ: ಈ ರಾಶಿಯಲ್ಲಿ ಮಂಗಳ ಶಷ್ಟಮ ಭಾವದಲ್ಲಿರುವ ಕಾರಣ ಈ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಿರುವಾಗ ಈ ರಾಶಿಯ ಜನರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಎದುರಾಳಿಗಾಲ ಮೇಲೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಆತ್ಮವಿಶ್ವಾಸದ ಸಹಾಯದಿಂದ ಪ್ರತಿಯೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ. ನೌಕರ ವರ್ಗದ ಜನರಿಗೆ ಮತ್ತು ಬಿಸ್ನೆಸ್ ಮಾಡುವವರಿಗೆ ಈ ಅವಧಿಯಲ್ಲಿ ಸಾಕಷ್ಟು ಆಕಸ್ಮಿಕ ಧನಲಾಭ ಉಂಟಾಗಲಿದೆ.
ತುಲಾ ರಾಶಿ: ಈ ರಾಶಿಯ ಷಷ್ಟ್ರಮ ಭಾವದಲ್ಲಿ ಶತ್ರುಹಂತಾ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ರಾಶಿಯ ಜನರಿಗೆ ಪ್ರತಿಯೊಂದು ಸವಾಲಿನ ಮೇಲೆ ಗೆಲುವು ಸಾಧಿಸುವರು. ನೌಕರವರ್ಗದ ಜನರು ತಮ್ಮ ಪರಿಶ್ರಮದ ಬಲದಿಂದ ಹೊಸ ಎತ್ತರಕ್ಕೆ ಹೋಗುವರು. ಆದರೆ, ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿ ನಿಮಗೆ ಶತ್ರುಗಳೂ ಎದುರಾಗಲಿದ್ದಾರೆ. ಆದರೆ, ಅವರನ್ನೆಲ್ಲಾ ಮೀರಿ ನೀವು ಮುಂದಕ್ಕೆ ಸಾಗುವಲ್ಲಿ ಯಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)