Powerful Yog 2024: ಮಂಗಳನ ರಾಶಿಯಲ್ಲಿ ಶಕ್ತಿಶಾಲಿ ತ್ರಿಗ್ರಹಿ ಯೋಗ, ಈ ಜನರ ಜೀವನದಲ್ಲಿ ಅಪಾರ ಧನ-ಸಂಪತ್ತಿನ ಆಗಮನ!

Tue, 09 Jan 2024-3:36 pm,

Powerful Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಚಂದ್ರ, ಬುಧ ಹಾಗೂ ಶುಕ್ರರ ಮೈತ್ರಿ ನೆರೆವೆರುತ್ತಿದೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಆಕಸ್ಮಿಕ ಧನಾಗಮನ ಸಂಭವಿಸಲಿದೆ. (Spiritual News In Kannada)

ವೃಷಭ ರಾಶಿ: ನಿಮ್ಮ ಜಾತಕದ ಏಳನೇ ಭಾವದಲ್ಲಿ ಈ ಯೋಗ ರಚನೆಯಾಗುತ್ತಿದೆ. ಇದರಿಂದ ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಪ್ರೇಮ ಸಂಬಂಧದಲ್ಲಿಯೂ ಕೂಡ ಇದು ಯಶಸ್ಸನ್ನು ನೀಡಲಿದೆ. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಬಿಸ್ನೆಸ್ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ. ವೃತ್ತಿ ಜೀವನದಲ್ಲಿನ ನಿಮ್ಮ ಸಮಸ್ಯೆಗಳು ನಿವಾರಣೆಯಗಲಿವೆ.   

ಕನ್ಯಾ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಮೂರನೇ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಿರುವಾಗ ನೀವು ನಿಮ್ಮ ಸ್ನೇಹಿತರ ಜೊತೆಗೂಡಿ ಪ್ರವಾಸ ಪ್ಲಾನ್ ಮಾಡುವ ಸಾಧ್ಯತೆ ಇದೆ. ಇನ್ನೊಂದೆಡೆ ನಿಮಗೆ ಹೂಡಿಕೆಯಿಂದ ಅಪಾರ ಲಾಭ ಹರಿದುಬರಲಿದೆ. ಕಾಲಕಾಲಕ್ಕೆ ಧನಲಾಭ ಉಂಟಾಗುವ ಸಾಧ್ಯತೆ ಕೂಡ ಇದೆ. ಭಾಗ್ಯದ ಸಂಪೂರ್ಣ ಬೆಂಬಲ ಇರುವ ಕಾರಣ ನಿಮ್ಮ ಸ್ಥಿತಿಯಲ್ಲಿ ಸುಧಾರಣೆ ಇರಲಿದ್ದು, ಧನಪ್ರಾಪ್ತಿಯ ಹೊಸ ಮಾರ್ಗಗಳೂ ಕೂಡ ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿಪಾಸ್ತಿ ಕೂಡ ಖರೀದಿಸುವ ಸಾಧ್ಯತೆ ಇದೆ.   

ತುಲಾ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಸ್ಥಾನದಲ್ಲಿ ರಚನೆಯಾಗುತ್ತಿದ್ದು, ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ಕೌಟುಂಬಿಕ ವಾತಾವರಣ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಪ್ರಭಾವಶಾಲಿ ವ್ಯಕ್ತಿಗಳೊಂದಿಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಲಾಭ ಉಂಟಾಗಲಿದೆ. ವ್ಯಾಪಾರಿಗಳಿಗೆ ಅವರ ಸಿಲುಕಿಬಿದ್ದ ಹಣ ಸಿಗಲಿದೆ. ಸುಖ ಸೌಕರ್ಯಗಳಲ್ಲಿ ವೃದ್ಧಿ ಇರಲಿದೆ. ಘನತೆ-ಗೌರವ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link