PPF ನಲ್ಲಿ ಎಷ್ಟು ಹೂಡಿಕೆ ಮಾಡಬೇಕು ಮತ್ತು ಎಷ್ಟು ಲಾಭ ಸಿಗುತ್ತದೆ, ಇಲ್ಲಿದೆ ಲೆಕ್ಕಾಚಾರ

Fri, 25 Nov 2022-1:42 pm,

1. ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆ, ನಿಮ್ಮ ಹೂಡಿಕೆಯ ಮೇಲೆ ಖಾತರಿ ಆದಾಯವನ್ನು ಪಡೆಯಲು ನೀವು ಬಯಸುತ್ತಿದ್ದರೆ, ನೀವು PPF ನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. PPF ಖಾತೆಯು 15 ವರ್ಷಗಳಲ್ಲಿ ಮ್ಯಾಚೂರ್ ಆಗುತ್ತದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಸಹ ಪಡೆಯಬಹುದು.  

2. ಪ್ರಸ್ತುತ, PPF ಮೇಲೆ ಶೇ.7.1 ರಷ್ಟು ವಾರ್ಷಿಕ ಬಡ್ಡಿ ಸಿಗುತ್ತಿದೆ. ಇದರಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ನೀವು ಮಾಸಿಕ ಆಧಾರದ ಮೇಲೆ ಸಹ ಹೂಡಿಕೆ ಮಾಡಬಹುದು. ನೀವು ಪ್ರತಿ ತಿಂಗಳು 1000, 2000, 5000 ಮತ್ತು 10000 ರೂಪಾಯಿಗಳನ್ನು PPF ನಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಎಷ್ಟು ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

3. ಪಿಪಿಎಫ್‌ನಲ್ಲಿ ಪ್ರತಿ ತಿಂಗಳು ರೂ 1000 ಹೂಡಿಕೆ ಮಾಡಿದರೆ, ನೀವು 15 ವರ್ಷಗಳಲ್ಲಿ ಒಟ್ಟು ರೂ 1.8 ಲಕ್ಷ ಹೂಡಿಕೆ ಮಾಡಿದಂತಾಗುತ್ತದೆ. 15 ವರ್ಷಗಳಲ್ಲಿ, ನೀವು 7.1% ಬಡ್ಡಿದರದಲ್ಲಿ 1,45,457 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತೀರಿ. ಈ ರೀತಿಯಾಗಿ, ಮೆಚ್ಯೂರಿಟಿಯಲ್ಲಿ ನಿಮ್ಮ ಒಟ್ಟು ಆದಾಯವು ರೂ 3,25,457 ಆಗುತ್ತದೆ.  

4. ತಿಂಗಳಿಗೆ 2000 ರೂಪಾಯಿ ಹೂಡಿಕೆಯ ಮೇಲೆ  ಲೆಕ್ಕ ಹಾಕಿದರೆ ಪ್ರತಿ ವರ್ಷ 24 ಸಾವಿರ ರೂಪಾಯಿ ಠೇವಣಿ ಇಡುತ್ತೀರಿ. 15 ವರ್ಷಗಳಲ್ಲಿ, ನೀವು ಒಟ್ಟು 3.60 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಅಂದರೆ, 15 ವರ್ಷಗಳ ನಂತರ, ನೀವು ಇದರ ಮೇಲೆ ರೂ 2,90,913 ಬಡ್ಡಿಯನ್ನು ಪಡೆಯುವಿರಿ. ಹೀಗಾಗಿ ಮ್ಯಾಚ್ಯೂರಿಟಿ ಬಳಿಕ ಒಟ್ಟು 6,50,913 ರೂ. ಮೊತ್ತ ನಿಮ್ಮ ಕೈಸೇರುತ್ತದೆ.   

5. ಪಿಪಿಎಫ್‌ನಲ್ಲಿ ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ ಮಾಡುವ ಮೂಲಕ, ನೀವು 15 ವರ್ಷಗಳಲ್ಲಿ 9 ಲಕ್ಷ ರೂ. ಹೂಡಿಕೆ ಮಾಡುವಿರಿ. ಇದರ ಮೇಲೆ, ನೀವು 7.1% ರ ಚಕ್ರಬಡ್ಡಿಯ ಆಧಾರದ ಮೇಲೆ 7,27,284 ರೂಗಳನ್ನು ಬಡ್ಡಿ ರೂಪದಲ್ಲಿ ಪಡೆಯುವಿರಿ. ಈ ರೀತಿಯಾಗಿ, ನೀವು ನಿಮ್ಮ ಹೂಡಿಕೆ ನಿಗದಿತ ಅವಧಿ ಪೂರೈಸಿದ ಬಳಿಕ  ಒಟ್ಟು 16,27,284 ರೂಗಳನ್ನು ಪಡೆಯುವಿರಿ.  

6. ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, ನೀವು ಒಂದು ವರ್ಷದಲ್ಲಿ 1.2 ಲಕ್ಷ ಹೂಡಿಕೆ ಮಾಡಿದಂತಾಗುತ್ತದೆ. ಆದರೆ 15 ವರ್ಷಗಳಲ್ಲಿ ನಿಮ್ಮ ಈ ಹೂಡಿಕೆ 18 ಲಕ್ಷ ರೂ. ಆಗಲಿದೆ. 15 ವರ್ಷಗಳಲ್ಲಿ ಈ ಹೂಡಿಕೆಯ ಮೇಲೆ ನೀವು 14,54,567 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುವಿರಿ. ಈ ರೀತಿಯಾಗಿ,ಮ್ಯಾಚ್ಯೂರಿಟಿ ಅವಧಿಯ ಬಳಿಕ ನಿಮಗೆ ಒಟ್ಟು 32.54 ಲಕ್ಷ ರೂ.ಸಿಗಲಿದೆ,  

ZEENEWS TRENDING STORIES

By continuing to use the site, you agree to the use of cookies. You can find out more by Tapping this link