ಗ್ಯಾರಂಟಿ ರಿಟರ್ನ್ ಮಾತ್ರ ಅಲ್ಲ ಈ ಸ್ಕೀಮ್ ನಲ್ಲಿ ಸಿಗಲಿದೆ ಈ ಐದು ಅದ್ಭುತ ಲಾಭ
ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕದಲ್ಲಿ ಪಿಪಿಎಫ್ ಖಾತೆಯ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸುತ್ತದೆ. ಪ್ರಸ್ತುತ, ಪಿಪಿಎಫ್ ಮೇಲಿನ ಬಡ್ಡಿದರವು ಶೇಕಡಾ 7.1 ಆಗಿದೆ. ಇದನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ.
15 ವರ್ಷಗಳಿಗೆ PPF ಖಾತೆ ಮೆಚುರ್ ಆಗುತ್ತದೆ. ಆದರೆ ಖಾತೆದಾರರು, 5- 5 ವರ್ಷಗಳ ಬ್ಲಾಕಫ್ ಗಳಲ್ಲಿ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ, ಕೊಡುಗೆಯನ್ನು ಮುಂದುವರೆಸುವ ಅಥವಾ ನಿಲ್ಲಿಸುವ ಆಯ್ಕೆಯನ್ನು ಸಹ ಖಾತೆದಾರರು ಪಡೆಯುತ್ತಾರೆ. ಇದರ ಪ್ರಯೋಜನವೆಂದರೆ ದೀರ್ಘಾವಧಿಯಲ್ಲಿ, ದೊಡ್ಡ ಮೊತ್ತವನ್ನು ಪಡೆಯಬಹುದು.
ಪಿಪಿಎಫ್‌ನಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಸಿಗಲಿವೆ. ಇದರಲ್ಲಿ 1.5 ಲಕ್ಷ ರೂ.ವರೆಗಿನ ಹೂಡಿಕೆಯ ಕಡಿತವನ್ನು ಯೋಜನೆಯಲ್ಲಿ ತೆಗೆದುಕೊಳ್ಳಬಹುದು. ಪಿಪಿಎಫ್‌ನಲ್ಲಿ ಗಳಿಸಿದ ಬಡ್ಡಿ ಮತ್ತು ಮೆಚುರಿಟಿ ಮೊತ್ತಡ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.
ಸಣ್ಣ ಉಳಿತಾಯ ಯೋಜನೆಗಳನ್ನು ಸರ್ಕಾರ ಪ್ರಾಯೋಜಿಸುತ್ತದೆ. ಆದ್ದರಿಂದ, ಇದರಲ್ಲಿನ ಹೂಡಿಕೆ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಇದರಲ್ಲಿ, ಗಳಿಸಿದ ಬಡ್ಡಿಗೆ ಗ್ಯಾರಂಟಿ ಇದ್ದು, ಅದು ಬ್ಯಾಂಕ್ ನಿಂದ ಗಳಿಸುವ ಬಡ್ಡಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. ಬ್ಯಾಂಕ್ ಠೇವಣಿಗೆ ಹೋಲಿಸಿದರೆ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ 5 ಲಕ್ಷ ರೂಗಳವರೆಗೆ ಮಾತ್ರ ಸಿಗುತ್ತದೆ.
ಪಿಪಿಎಫ್ ಖಾತೆಯ ಮೇಲೆ ಸಾಲ ಸೌಲಭ್ಯವೂ ಲಭ್ಯವಿದೆ. ಪಿಪಿಎಫ್ ಖಾತೆ ತೆರೆದ ವರ್ಷದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮತ್ತು 5 ವರ್ಷಗಳು ಪೂರ್ಣಗೊಳ್ಳುವ ಮೊದಲು ಸಾಲಕ್ಕೆ ಅರ್ಜಿ ಸಲ್ಲಿಸಬಹುದು.