PPF vs Bank FD: ಎಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ
ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ಅನ್ನು ಸಾರ್ವಜನಿಕ ಭವಿಷ್ಯ ನಿಧಿ ಎಂತಲೂ ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 15ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಬಳಿಕ ಗ್ರಾಹಕರು ಇದನ್ನು 5 ವರ್ಷಗಳವರೆಗೆ ಮೂರು ಬಾರಿ ವಿಸ್ತರಿಸಬಹುದಾಗಿದೆ. ಪಿಪಿಎಫ್ ನಲ್ಲಿ ನಿಮ್ಮ ಹೂಡಿಕೆಯನ್ನು 15ವರ್ಷಗಳವರೆಗೆ ಹಿಂಪಡೆಯಲು ಸಾಧ್ಯವಿಲ್ಲ.
ಪ್ರತಿ ಆರ್ಥಿಕ ವರ್ಷದಲ್ಲಿ ಪಿಪಿಎಫ್ ನಲ್ಲಿ ಕನಿಷ್ಠ 500 ರೂ. ನಿಂದ ಗರಿಷ್ಠ 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಪಿಪಿಎಫ್ ನಲ್ಲಿ ಹೂಡಿಕೆಯ ಮೇಲೆ ಶೇ.7.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಇದಲ್ಲದೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಕೂಡ ಲಭ್ಯವಿದೆ.
ಬಹಳಷ್ಟು ಮಂದಿಗೆ ಇಂದಿಗೂ ಕೂಡ ಬ್ಯಾಂಕ್ ಎಫ್‌ಡಿ ಹೆಚ್ಚು ಸುರಕ್ಷಿತ ಯೋಜನೆ ಎಂದೆನಿಸುತ್ತದೆ. ಗ್ರಾಹಕರು ಗ್ರಾಹಕರು 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಭಾರತದ ಪ್ರಸಿದ್ದ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಹೂಡಿಕೆ ಮೇಲೆ ಜನರಿಗೆ ಶೇಕಡಾ 3 ರಿಂದ 7.10 ರವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.50 ರಿಂದ 7.60 ರವರೆಗೆ ಬಡ್ಡಿಯನ್ನು ನೀಡುತ್ತದೆ.
ಹೂಡಿಕೆಯ ಮೇಲೆ ಬಡ್ಡಿ ಪ್ರಯೋಜನಗಳನ್ನು ನೋಡುವುದಾದರೆ, ಪ್ರಸ್ತುತ ಪಿಪಿಎಫ್ ಯೋಜನೆಯಲ್ಲಿ ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಲಾಭವನ್ನು ನೀಡಲಾಗುತ್ತಿದೆ. ಇದಲ್ಲದೆ, ಪಿಪಿಎಫ್ ಯೋಜನೆಯಲ್ಲಿ ತೆರಿಗೆ ಪ್ರಯೋಜನಗಳು ಲಭ್ಯವಿದೆ. ಇದಲ್ಲದೆ, ಪಿಪಿಎಫ್ ನಲ್ಲಿನ ಹೂಡಿಕೆಯು ದೀರ್ಘಾವಧಿಯ ಹೂಡಿಕೆ ಯೋಜನೆ ಆಗಿದ್ದು, ಇದು ನಿವೃತ್ತಿಯ ನಂತರದ ಜೀವನಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ.