Prabhas: ನಟ ಪ್ರಭಾಸ್ ಯಶಸ್ಸಿಗಾಗಿ ಹೆಸರನ್ನೇ ಬದಲಿಸಿಕೊಂಡ್ರಾ?
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಹುದಿನಗಳ ಬಳಿಕ ಯಶಸ್ಸು ನೀಡಿತು.
ಸಲಾರ್ ಬಳಿಕ ಪ್ರಭಾಸ್ 'ರಾಜಾ ಸಾಬ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಇಂದು ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.
ರಾಜಾ ಸಾಬ್ ಪೋಸ್ಟರ್‌ನಲ್ಲಿ ನಟ ಪ್ರಭಾಸ್ ' ಪವರ್ ಫುಲ್ ಲುಕ್ ನಲ್ಲಿ ಮಿಂಚಿದ್ದಾರೆ. ಇದರ ಜೊತೆ ಪ್ರಭಾಸ್ ಹೆಸರು ಬದಲಾವಣೆಯ ಸುಳಿವು ಕೂಡ ನೀಡಿದೆ.
ರಾಜಾ ಸಾಬ್ ಚಿತ್ರದ ಪೋಸ್ಟರ್ ನಲ್ಲಿ ನಟ ಪ್ರಭಾಸ್ ಹೆಸರನ್ನು Prabhas ಬದಲಾಗಿ Prabhass ಎಂದು ಬರೆಯಲಾಗಿದೆ. Prabhas ಪಕ್ಕದಲ್ಲಿ ಮತ್ತೊಬ್ಬ s ಸೇರಿಸಲಾಗಿದೆ.
ಪ್ರಭಾಸ್ ಸಂಖ್ಯಾಶಾಸ್ತ್ರದ ಪ್ರಕಾರ, ಎಸ್ ಅಕ್ಷರವನ್ನು ಸೇರಿಸಿರಬಹುದು ಎಂದು ಹೇಳಲಾಗುತ್ತಿದೆ.
ಸಿನಿಮಾದ ಯಶಸ್ಸಿಗಾಗಿ ಪ್ರಭಾಸ್ ಹೆಸರು ಬದಲಿಸಿಕೊಂಡ್ರಾ ಎಂಬ ಚರ್ಚೆಗೆ ಇದು ದಾರಿ ಮಾಡಿಕೊಟ್ಟಿದೆ.
ಪ್ರಭಾಸ್ ಹೆಸರಿನಲ್ಲಾದ ಈ ಬದಲಾವಣೆ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ನಡೆದಿದ್ದಾ ಅಥವಾ ಅವರು ತಮ್ಮ ಹೆಸರಿನ ಕಾಗುಣಿತವನ್ನು ಬದಲಾಯಿಸಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.