ಇದಪ್ಪ ಸೀರೆ ಉಡುವ ಪದ್ದತಿ ಅಂದ್ರೆ, ಉರ್ಕೋಳೋದು ಬಿಟ್ಟು ನೋಡಿ ಕಲೀರಿ... ಗರ್ಲ್ಸ್..!
)
ಮಾಳವಿಕಾ ಮೋಹನನ್.. 2013 ರಲ್ಲಿ ಮಲಯಾಳಂ ಚಿತ್ರ 'ಪಟ್ಟಂ ಪೋಲ್' ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.
)
2016ರಲ್ಲಿ ನಾನು ಮತ್ತು ವರಲಕ್ಷ್ಮ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಈ ಸುಂದರಿ ಹತ್ತಿರವಾದರು.
)
ಮಲಯಾಳಿ ಮುದ್ದು ಗೊಂಬೆ ಮಾಳವಿಕಾ ಮೋಹನನ್ ತಮ್ಮ ನಟನೆಗಿಂತ ಫೋಟೋ ಶೂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ.
ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಮಗಳಾಗಿ ಮಾಳವಿಕಾ ನಾಯಕಿಯಾಗಿ ಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದರು.
ಸಧ್ಯ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಚಿತ್ರದ ಮೂಲಕ ಪ್ರಭಾಸ್ ಜೊತೆ ಮಾಳವಿಕಾ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.
ಈ ಸಿನಿಮಾದ ಮೇಲೆ ಮಾಳವಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಇದಲ್ಲದೆ ಈ ಸುಂದರಿ 'ತಂಗಳನ್' ಚಿತ್ರದಲ್ಲಿಯೂ ನಟಿಸಿದ್ದಾರೆ. ಬ್ರಿಟಿಷರ ಕಾಲದ ಕಥಾಹಂದರ ಹೊಂದಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.
ಸಧ್ಯ ಕೆಂಪು ಸೀರೆಯಲ್ಲಿ ತನ್ನ ಅಮೋಘ ಸೌಂದರ್ಯ ಪ್ರದರ್ಶನ ನೀಡಿರುವ ಚೆಲುವೆ ನೆಟ್ಟಿಗರ ಗಮನಸೆಳೆಯುತ್ತಿದ್ದಾಳೆ..