ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..
)
ಮಾಳವಿಕಾ ಮೋಹನನ್ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. 2013 ರಲ್ಲಿ "ಪಟ್ಟಂಪೋಲೆ" ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
)
ನಟಿ ಮಾಳವಿಕಾ ಮೋಹನನ್ ರಜನಿಕಾಂತ್ ಅಭಿನಯದ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ʼಪೆಟ್ಟಾʼ ಚಿತ್ರದ ಮೂಲಕ ಸೌತ್‌ಸಿನಿ ಅಭಿಮಾನಿಗಳ ಗಮನ ಸೆಳೆದರು.
)
ಆ ನಂತರ ಲೋಕೇಶ್ ಕನಕರಾಜ್ ನಿರ್ದೇಶನದ, ನಟ ವಿಜಯ್ ಜೊತೆ ʼಮಾಸ್ಟರ್ʼ ಸಿನಿಮಾದಲ್ಲಿ ನಟಿಸಿ ಫ್ಯಾನ್ಸ್ ಫಾಲೋಯಿಂಗ್ ಹೆಚ್ಚಿಸಿಕೊಂಡರು..
ಇತ್ತೀಚೆಗೆ ನಿರ್ದೇಶಕ ಬಿ. ರಂಜಿತ್ ನಿರ್ದೇಶನದ ವಿಕ್ರಮ್ ಅವರ "ತಂಗಲನ್" ನಲ್ಲಿ ಮಾಳವಿಕಾ ಮೋಹನನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಚಿತ್ರದಲ್ಲಿ ಮಾಳವಿಕಾ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದರು.
2016ರಲ್ಲಿ ನಾನು ಮತ್ತು ವರಲಕ್ಷ್ಮ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಈ ಸುಂದರಿ ಹತ್ತಿರವಾದರು.
ಮಲಯಾಳಿ ಮುದ್ದು ಗೊಂಬೆ ಮಾಳವಿಕಾ ಮೋಹನನ್ ತಮ್ಮ ಸಿನಿಮಾಗಳ ಜೊತೆಗೆ ಫೋಟೋ ಶೂಟ್‌ಗಳಿಂದಲೂ ಹೆಚ್ಚು ಸುದ್ದಿಯಲ್ಲಿದ್ದಾರೆ.
ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಮಗಳಾಗಿ ಮಾಳವಿಕಾ ನಾಯಕಿಯಾಗಿ ಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದರು.
ಸಧ್ಯ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಚಿತ್ರದ ಮೂಲಕ ಪ್ರಭಾಸ್ ಜೊತೆ ಮಾಳವಿಕಾ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಾಳವಿಕಾ ಮೋಹನನ್ ಇತ್ತೀಚೆಗಷ್ಟೇ ಹಂಚಿಕೊಂಡ ಫೋಟೋಸ್ ಸಖತ್ ವೈರಲ್ ಆಗಿವೆ.