ಬ್ಯಾಟ್‌ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದ್ದೇ ಈತನಿಂದ...

Sun, 21 Jul 2024-3:35 pm,

ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಮತ್ತು ರೋಹಿತ್ ಶರ್ಮಾ ಚಿಕ್ಕ ವಯಸ್ಸಿನಿಂದಲೇ ಪರಿಚಿತರು. ಐಪಿಎಲ್‌ʼನ ಉದ್ಘಾಟನಾ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ ಪರ ಒಟ್ಟಿಗೆ ಆಡಿದ್ದರು. 

ರೋಹಿತ್ ಶರ್ಮಾ ತನ್ನ ಆರಂಭಿಕ ದಿನಗಳನ್ನು ನೆನಪಿಸಿಕೊಂಡಾಗ ಮತ್ತು ಕ್ರಿಕೆಟ್ ಕಿಟ್‌ ಖರೀದಿಸಲು ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡಾಗ ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂದು ಪ್ರಗ್ಯಾನ್ ಓಜಾ ಹೇಳಿಕೊಂಡಿದ್ದಾರೆ.   

ಮುಂಬೈ ಇಂಡಿಯನ್ಸ್‌ʼನಲ್ಲಿ ಕೂಡ ಓಜಾ ಮತ್ತು ರೋಹಿತ್ ಜೊತೆಯಾಗಿ ಆಡಿದ್ದರು. ಅಷ್ಟೇ ಅಲ್ಲದೆ,  2013 ಮತ್ತು 2015 ರಲ್ಲಿ ಪ್ರಶಸ್ತಿ ಗೆದ್ದಾಗ ಇಬ್ಬರೂ ಆ ತಂಡದಲ್ಲಿದ್ದರು.   

ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಗ್ಯಾನ್ ಓಜಾ, '15 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರದಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಅವರನ್ನು ಭೇಟಿಯಾದಾಗ, ಅವರು ವಿಶೇಷ ಆಟಗಾರ ಎಂದು ಎಲ್ಲರೂ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ನಾನು ಅವರ ವಿರುದ್ಧ ಆಡಿ ವಿಕೆಟ್ ಪಡೆದೆ" ಎಂದರು.  

"ರೋಹಿತ್ ಹೆಚ್ಚು ಮಾತನಾಡುವುದಿಲ್ಲ, ಆದರೆ ಆಡುವಾಗ ಆಕ್ರಮಣಕಾರಿ. ನಮಗಿನ್ನೂ ಪರಿಚಯವೇ ಇಲ್ಲದಿದ್ದರೂ ನನ್ನೆದುರು ಆಕ್ರಮಣಕಾರಿಯಾಗುತ್ತಿದ್ದದ್ದು ನನಗೂ ಆಶ್ಚರ್ಯವಾಗಿತ್ತು. ಆದರೆ ಇದಾದ ನಂತರ ನಮ್ಮ ಸ್ನೇಹ ಬೆಳೆಯಲಾರಂಭಿಸಿತು. ರೋಹಿತ್ ಶರ್ಮಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಒಮ್ಮೆ ಅವರು ಭಾವುಕರಾಗಿ ಕ್ರಿಕೆಟ್ ಕಿಟ್ ಖರೀದಿಸಲು ಹಣವಿಲ್ಲ ಎಂದು ಹೇಳಿದ್ದು ನನಗೆ ನೆನಪಿದೆ. ಹಾಲಿನ ಪ್ಯಾಕೆಟ್‌ʼಗಳನ್ನು ಮಾರುತ್ತಿದ್ದರು" ಎಂಬ ವಿಚಾರವನ್ನು ಓಜಾ ಬಹಿರಂಗಪಡಿಸಿದ್ದಾರೆ.   

" ಕ್ರಿಕೆಟ್ ಕಿಟ್ ಖರೀದಿಸಲು ಹಾಲಿನ ಪ್ಯಾಕೆಟ್‌‌ʼಗಳನ್ನು ಮಾರಾಟ ಮಾಡಿದರು. ಈಗ ಅವರನ್ನು ನೋಡಿದಾಗ ಅವರ ಪಯಣ ಹೇಗೆ ಆರಂಭವಾಗಿತ್ತು, ಎಲ್ಲಿಗೆ ತಲುಪಿದೆವು ಎಂಬುದಕ್ಕೆ ಹೆಮ್ಮೆ ಎನಿಸುತ್ತದೆ" ಎಂದು ಸಂತಸದ ಮಾತುಗಳನ್ನಾಡಿದ್ದಾರೆ.  

ಅಂದಹಾಗೆ ವರದಿಗಳ ಪ್ರಕಾರ, ಪ್ರಸ್ತುತ ರೋಹಿತ್‌ ಶರ್ಮಾ 214 ಕೋಟಿ ರೂ. ಆಸ್ತಿ ಒಡೆಯನಾಗಿದ್ದಾರೆ. ಒಂದೊಮ್ಮೆ ಬಾಲ್ಯದಲ್ಲಿ 275 ರೂ. ಸ್ಕೂಲ್‌ ಫೀಸ್‌ ಕಟ್ಟಲು ಕೂಡ ರೋಹಿತ್‌ ಪರದಾಡಿದ್ದರು ಎಂದು ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link