Pranitha Subhash: ಮುದ್ದು ಮಗಳ 2ನೇ ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ!

Tue, 02 Apr 2024-5:02 pm,

ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್ ತಮ್ಮ ಮುದ್ದಾದ ಮಗಳ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ನಟಿ ಇಂತಹ ಸಂತಸದ ಸಂದರ್ಭದಲ್ಲಿ ಮಗಳ ಜೊತೆಗೆ ಕ್ಯೂಟ್‌ ಫೋಟೊಶೂಟ್‌ ಮಾಡಿಸಿದ್ದಾರೆ.  

ಕನ್ನಡದ ನಟಿ ಪ್ರಣೀತಾ ಸುಭಾಷ್‌  ತಮ್ಮ ಪುತ್ರಿಯ ಎರಡನೇ ಜನ್ಮದಿನದ ಫೋಟೊಗಳ್ನು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ "ನನ್ನ ಮುದ್ದು ಗೊಂಬೆಗೆ ಈಗ 2 ವರ್ಷ. ಅಪ್ಪ - ಅಮ್ಮ ಆಗಿ ನಾವು ಬಡ್ತಿ ಪಡೆದು ಈಗ 2 ವರ್ಷವಾಯಿತು" ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಮಿಲ್ಕಿ ಬ್ಯೂಟಿ ಪ್ರಣೀತಾ ಸುಭಾಷ್‌ 2021ರ ಮೇ ತಿಂಗಳಿನಲ್ಲಿ ಉದ್ಯಮಿ ನಿತಿನ್ ರಾಜು ಜೊತೆಗೆ ವಿವಾಹವಾದರೂ. ತಮ್ಮ ಮದುವೆಯ ಬಳಿಕ ಈ ನಟಿ ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದು, ಕಳೆದ ಮೂರು ವರ್ಷದಿಂದ ಚಿತ್ರರಂಗದಿಂದ ದೂರು ಉಳಿದಿದ್ದಾರೆ.  

ನಟಿ ಪ್ರಣೀತಾ ಸುಭಾಷ್ 2022 ರ ಏಪಿಲ್‌ 2 ರಂದು ಹೆಣ್ಣು ಮಗವಿಗೆ ಜನ್ಮ ನೀಡಿದ್ದು, ಆ ಮುದ್ದಾದ ಮಗುವಿಗೆ  ಆರ್ನಾ ಎಂದು ಹೆಸರಿಟ್ಟಿದ್ದಾರೆ. ಈ ನಟಿ ತಮ್ಮ ಆಗಾಗ ತಮ್ಮ ಮಗಳ ಜೊತೆಗಿರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.  

ಪ್ರಣೀತಾ ಸುಭಾಷ್‌ ಚಂದನವನದ ನಟ ಚಾಲೆಂಜಿಂಗ್‌ ಸ್ಟಾರ್‌ ಅಭಿನಯ ಪೊರ್ಕಿ ಸಿನಿಮಾದ ಮೂಲಕ ನಾಯಕಿಯಾಗಿ ಅಭಿನಯಿಸಿದ್ದು, ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ಈಕೆ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದೆ, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ.  

ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಕಳೆದ ಮೂರು ವರ್ಷದಿಂದ ಈಕೆಯನ್ನು ಬೆಳ್ಳಿತೆರೆ ಮೇಲೆ ಮಿಸ್‌ ಮಾಡಿಕೊಂಡ ಈ ನಟಿಯನ್ನು, ಮುಂದಿನ ತಿಂಗಳು ರಿಲೀಸ್‌ ಆಗಲು ಸಜ್ಜಾಗಿರುವ ʻರಾಮನ ಅವತಾರʼ ಸಿನಿಮಾದಲ್ಲಿ ಕಾಣಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link