ಸಕತ್ತಾಗವ್ಳೆ.. ಸುಮ್ನೆ ನಗ್ತಾಳೆ..! ನಟಿ ಪ್ರಣಿತಾ ಫೋಟೋಸ್‌ ವೈರಲ್‌

Thu, 05 Oct 2023-7:16 pm,

ದರ್ಶನ್‌ ನಟನೆಯ ಪೋರ್ಕಿ ಸಿನಿಮಾದ ಮೂಲಕ ನಟಿ ಪ್ರಣಿತಾ ಸುಭಾಷ್ ಚಂದನವನಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಿಂದಲೇ ಉತ್ತಮ ನಟನೆಯಿಂದ ಜನ ಮನ ಗೆದ್ದರು.   

ಜರಾಸಂಧ್‌, ಭೀಮಾ ತೀರದಲ್ಲಿ, ಸ್ನೇಹಿತರು, ಮಿಸ್ಟರ್‌ 420, ಬ್ರಹ್ಮ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.  

ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪ್ರಣಿತಾ, ಪವನ್ ಕಲ್ಯಾಣ್ ಅವರ ಅತ್ತಾರಿಂಟಿಕಿ ದಾರೇದಿ ಮತ್ತು ಜೂನಿಯರ್ ಎನ್ಟಿಆರ್ ಅವರ ರಭಸದಲ್ಲಿ ನಟಿಸಿದ್ದಾರೆ.   

2021 ರಲ್ಲಿ ಪ್ರಣಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒರ್ವ ಮಗಳಿದ್ದಾಳೆ.   

ಸಧ್ಯ ಪ್ರಣಿತಾ ಹಂಗಾಮಾ 2 ಚಿತ್ರದ ಮೂಲಕ ಹಿಂದಿಯಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ.   

ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದರೂ ಪ್ರಣಿತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕಾಲಕಾಲಕ್ಕೆ ಕುಟುಂಬದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ  

ಮಗಳ ಜೊತೆ ಮೋಜು ಮಸ್ತಿ ಮಾಡುವ ವಿಡಿಯೋ ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಾಳೆ.  

ಇತ್ತೀಚೆಗಷ್ಟೇ ಪ್ರಣೀತಾ ಶೇರ್ ಮಾಡಿರುವ ಚಿತ್ರಗಳು ವೈರಲ್ ಆಗಿದ್ದು, ಸುಂದರಿಯ ಅಂದಕ್ಕೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link