ಆಭರಣ ಪ್ರಿಯರೇ ಎಚ್ಚರ..! ಮುಂದಿನ ಒಂದು ವಾರದಲ್ಲಿ ಗಗನಕ್ಕೇರಲಿದೆ ಚಿನ್ನದ ಬೆಲೆ? ಚಿನ್ನ ಕೊಳ್ಳುವ ಪ್ಲಾನ್‌ ಇದ್ದರೆ ಇದುವೇ ಸೂಕ್ತ ಸಮಯ

Thu, 03 Oct 2024-12:58 pm,

Gold price: ದೇಶದಾದ್ಯಂತ ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ನವರಾತ್ರಿಯ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಅಕ್ಟೋಬರ್ 3, 2024 ರಂದು, ಚಿನ್ನದ ಬೆಲೆ 500 ರೂ ಏರಿಕೆ ಕಂಡಿದೆ.   

ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,600 ರೂಗೆ ಏರಿಕೆಯಾಗಿದ್ದು, ಕೆಲವು ನಗರಗಳಲ್ಲಿ ಮಾತ್ರ ಚಿನ್ನದ ಬೆಲೆ 77,000 ರೂ.ಗೆ ಲಭ್ಯವಿದೆ.   

22 ಕ್ರಾರಟ್‌ನ 10 ಗ್ರಾಂ ಚಿನ್ನದ ದರ 71,000 ರೂ.ಗೆ ಏರಿಕೆಯಾಗಿದ್ದು, 18 ಕ್ಯಾರೆಟ್ ನ ಚಿನ್ನದ ಬೆಲೆ 10 ಗ್ರಾಂಗೆ 5800 ರೂ. ದಾಟಿದೆ.  

ಹೀಗೆ ದಿನೇ ದಿನೇ ಚಿನ್ನದ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 9000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.   

ಆಭರಣ ಪ್ರಿಯರು ಚಿನ್ನ ಕೊಳ್ಳುವ ಪ್ಲಾನ್‌ನಲ್ಲಿದ್ದರೆ ಚಿನ್ನ ಕೊಳ್ಳಲು ಇದು ಸೂಕ್ತ ಸಮಯ, ನವರಾತ್ರಿ ಮೊದಲನೆ ದಿನವೇ ಚಿನ್ನದ ಬೆಲೆ ಖರೀದುದಾದರಿಗೆ ಶಾಕ್‌ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಭಾರಿ ಏರಿಕೆ ಕಾಣಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link